ಡಾ. ಗುರುರಾಜು ಹೆಬ್ಬಾರ್ 2ನೇ ವರ್ಷದ ಪುಣ್ಯಸ್ಮರಣೆ

ಡಾ. ಗುರುರಾಜು ಹೆಬ್ಬಾರ್ 2ನೇ ವರ್ಷದ ಪುಣ್ಯಸ್ಮರಣೆ
Published on

ಹಾಸನ: ನಗರದ ಹೊರವಲಯದಲ್ಲಿರುವ ಕಾಮದೇನು ಸಹಕಾರಿ ವಿದ್ಯಾಶ್ರಮದ ಆವರಣದಲ್ಲಿ ಚೈತನ್ಯ ಮಂದಿರ ವೃದ್ಧಾಶ್ರಮ ಹಾಗೂ ಶಿಶು ಕೇಂದ್ರ ಅಮೂಲ್ಯವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಖ್ಯಾತ ವೈದ್ಯ ದಿ.ಡಾ. ಗುರುರಾಜ್ ಹೆಬ್ಬಾರ್ ರವರ ಎರಡನೇ ವರ್ಷದ ಪುಣ್ಯಸ್ಮರಣಾರ್ಥದ ಪ್ರಯುಕ್ತ ಆಶ್ರಮದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಾಧವ ಶೆಣೈ ಹಾಗೂ ಉಪಾಧ್ಯಕ್ಷ ಆನಂದ ಬಾಗಡೆ ಹಾಗೂ ಖಜಾಂಜಿ ಡಾ. ಜಿ. ಪ್ರತಿಭಾ, ನಿರ್ದೇಶಕರುಗಳಾದ ಚಂದ್ರಶೇಖರ್, ಡಾ. ರವಿಕುಮಾರ್, ಪರಮೇಶ್, ಜಯಲಕ್ಷ್ಮಿ, ಶಬ್ಬೀರ್ ಅಹಮದ್ ಹಾಗೂ ಮಾಜಿ ನಿರ್ದೇಶಕ ಕೃಷ್ಣ ಅಯ್ಯಂಗಾರ್, ಗೌರವ ಸಲಹೆಗಾ ವೆಂಕಟರಾಮು ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net