ಡಾ.ಕೋರೆ ಸೇವೆ ಶ್ಲಾಘನೀಯ

16Jaggu9
ಬೆಳಗಾವಿ ನಗರದ ಜೆಎನ್‌ಎಂಸಿ ಆವರಣದಲ್ಲಿ ಆಯೋಜಿಸಿದ್ದ ‘ಚಿಕ್ಕ ಮಕ್ಕಳ ತಜ್ಞರ ದಕ್ಷಿಣ ವಲಯದ ಸಂಘದ ಸಮ್ಮೇಳನ’ದಲ್ಲಿ ಡಾ. ಪ್ರಭಾಕರ ಕೋರೆ ಮಾತನಾಡಿದರು.
Published on

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಕರ್ನಾಟಕ, ಮಹಾರಾಷ್ಟ್ರ ಅಷ್ಟೇ ಅಲ್ಲ ದೇಶದ ಇತರ ಭಾಗಗಳಲ್ಲಿ ಸಂಸ್ಥೆಯ ಮೂಲಕ ಶಿಕ್ಷಣ, ಆರೋಗ್ಯ ಸೇವೆ ನೀಡುತ್ತಿದ್ದಾರೆ. ದೇಶದ ಆರೋಗ್ಯ ಕ್ಷೇತ್ರ ಅಭಿವೃದ್ಧಿಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಮಹಾರಾಷ್ಟ್ರದ ಕಂದಾಯ ಹಾಗೂ ಪಶುಸಂಗೋಪನೆ ಸಚಿವ ರಾಧಾಕೃಷ್ಣ ವಿಕರಿಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಹೆರ್‌ನ ಚಿಕ್ಕ ಮಕ್ಕಳ ತಜ್ಞರ ವಿಭಾಗ, ಕರ್ನಾಟಕ ಚಿಕ್ಕ ಮಕ್ಕಳ ಸಂಘ ಹಾಗೂ ಬೆಳಗಾವಿಯ ಚಿಕ್ಕ ಮಕ್ಕಳ ಸಂಘ, ಕರ್ನಾಟಕ ಮೆಡಿಕೋ ಲಿಗಲ್ ರೂಪ್ ಸಹಯೋಗದಲ್ಲಿ ಈಚೆಗೆ ನಗರದ ಜೆಎನ್‌ಎಂಸಿ ಆವರಣದ ಕೆಎಲ್‌ಇ ಸೆಂಟೆನರಿ ಕನ್ವೆನ್ಶನ್ ಸೆಂಟರ್‌ನಲ್ಲಿ ಭನುವಾರ ಆಯೋಜಿಸಿದ್ದ ‘ಚಿಕ್ಕ ಮಕ್ಕಳ ತಜ್ಞರ ದಕ್ಷಿಣ ವಲಯದ ಸಂಘದ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು. ಚಿಕ್ಕ ಮಕ್ಕಳ ಆರೋಗ್ಯ ಕಾಪಾಡುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ತಜ್ಞರು ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು ಎಂದರು.

ಕಾಹೆರ್ ಕುಲಾಪತಿ ಡಾ.ಪ್ರಭಾಕರ ಕೋರೆ ಮಾತನಾಡಿ, ಜೆಎನ್‌ಎಂಸಿಯ ಚಿಕ್ಕ ಮಕ್ಕಳ ವಿಭಾಗವು ಉತ್ತಮ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ. ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿದೆ. ತಾಯಿ-ಮಗುವಿನ ಆರೋಗ್ಯ ಹಾಗೂ ಸಂಶೋಧನಾ ಚಟುವಟಿಕೆಗಳಿಗಾಗಿ ಅಮೆರಿಕದ ಥಾಮಸ್ ಜರಸನ್ ಯುನಿವರ್ಸಿಟಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮಗುವಿನ ಆರೋಗ್ಯ ಸುಧಾರಣಾ ಉಪಕ್ರಮ ಕೈಗೊಳ್ಳುತ್ತಿದೆ ಎಂದರು.

ಸಮ್ಮೇಳನದಲ್ಲಿ ಸುಮಾರು ಒಂದು ಸಾವಿರ ಚಿಕ್ಕ ಮಕ್ಕಳ ತಜ್ಞರು ಪಾಲ್ಗೊಂಡಿದ್ದರು. ಭಾರತೀಯ ಚಿಕ್ಕ ಮಕ್ಕಳ ತಜ್ಞರ ಸಂಘದ ಅಧ್ಯಕ್ಷ ಡಾ. ರಮೇಶಕುಮಾರ್, ಮಾಜಿ ಅಧ್ಯಕ್ಷ ಪಿಯುಷ್ ಗುಪ್ತಾ, ಪ್ರಧಾನ ಕಾರ್ಯದರ್ಶಿ ಡಾ. ವಿನಿತ್ ಸಕ್ಸೆನಾ, ಕರ್ನಾಟಕ ಚಿಕ್ಕ ಮಕ್ಕಳ ವೈದ್ಯರ ಸಂಘದ ಅಧ್ಯಕ್ಷೆ, ಜೆಎನ್‌ಎಂಸಿ ಚಿಕ್ಕ ಮಕ್ಕಳ ವಿಭಾಗದ ಡಾ. ರೂಪಾ ಬೆಲ್ಲದ, ಜೆಎನ್‌ಎಂಸಿ ಪ್ರಾಚಾರ್ಯೆ ಡಾ. ನಿರಂಜನಾ ಎಸ್. ಮಹಾಂತಶೆಟ್ಟಿ, ಕಾಹೆರ್ ಯೋಜನಾ ನಿರ್ದೇಶಕ ಡಾ.ವಿ.ಡಿ.ಪಾಟೀಲ, ಡಾ.ಮನಿಶಾ ಬಂಡಾನಕರ, ಡಾ.ಉಪೇಂದ್ರ ಹಿಂಜೆವಾಡಕರ, ಡಾ.ವಿ.ಕೆ.ಗೋವೆಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net