ಡಾ. ಎಂ. ಈಶ್ವರಗೆ ಜೀವಮಾನ ಸಾಧನೆ ಪ್ರಶಸ್ತಿ

dr. m. ishwar
Published on

ಹುಬ್ಬಳ್ಳಿ: ಲಿಂಗರಾಜನಗರದ ಯೋಗ ಹಾಗೂ ಸೂಜಿ ಚಿಕಿತ್ಸಾ ಕೇಂದ್ರದ ನಿರ್ದೇಶಕ, ಕೆಎಲ್​ಇ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ. ಎಂ. ಈಶ್ವರ ಅವರಿಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಫೆಡರೇಶನ್ ಆಫ್ ಅಕ್ಯೂಪಂಕ್ಚರ್ ಸಂಸ್ಥೆಯಿಂದ ಜೀವಮಾನ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೆಎಯುಪಿ ಬೋರ್ಡ್ ಗೌರವಾಧ್ಯಕ್ಷ ಡಾ. ಹರೀಶ ಬಾಬು, ಇಸ್ರೋ ವಿಜ್ಞಾನಿ ಡಾ. ಬೋಜರಾಜ ಇತರರು ಇದ್ದರು.

ಸುಮಾರು 35 ವರ್ಷಗಳಿಂದ ಅಕ್ಯೂಪಂಕ್ಚರ್ ಸೇರಿದಂತೆ ಯೋಗ ಹಾಗೂ ಪ್ರಕೃತಿ ಚಿಕಿತ್ಸೆಯಲ್ಲಿ ತೊಡಗಿರುವ ಡಾ. ಎಂ. ಈಶ್ವರ ಅವರಿಗೆ ಕಳೆದ ವರ್ಷ ಇದೇ ಸಂಸ್ಥೆಯು ಕರ್ನಾಟಕ ಅಕ್ಯೂಪಂಕ್ಚರ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. 2023-24ರ ಗ್ಲೋಬಲ್ ಯೋಗ ಸಮ್ಮೇಳನದಲ್ಲಿ ಯೋಗ ಸಾಧನೆಗಾಗಿ ಜೀವಮಾನ ಪ್ರಶಸ್ತಿ ಕೂಡ ಸಂದಿದೆ. ಕರ್ನಾಟಕ ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳಿಗೆ ಈಶ್ವರ ಅವರು ಭಾಜರಾಗಿದ್ದಾರೆ. ಡಾ. ಎಂ. ಈಶ್ವರ ಅವರ ಸಾಧನೆಗೆ ಕರ್ನಾಟಕ ವಾಣಿಜ್ಯ ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net