ಡಾ. ಎ.ಪಿ.ಜೆ. ಅಬ್ದುಲ್ ಜೀವನ ಪ್ರೇರಣೆಯಾಗಲಿ

15 Dwd 10
Published on

ಧಾರವಾಡ: ಮಾಜಿ ರಾಷ್ಟ್ರಪತಿ ಮತ್ತು `ಮಿಸೈಲ್ ಮ್ಯಾನ್' ಎಂದೇ ಖ್ಯಾತರಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನ ಕಾರ್ಯಕ್ರಮವನ್ನು ನಗರದ ಅಂಜುಮನ್ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾಗಿತ್ತು.

ನಿವೃತ್ತ ಪ್ರಾಧ್ಯಾಪಕ ಎಂ.ಎನ್. ಮೀರಾ ನಾಯ್ಕ ಮಾತನಾಡಿ, ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ವಿಶ್ವಮಟ್ಟದಲ್ಲಿ ಖ್ಯಾತಿ ತಂದು ಕೊಟ್ಟ ಮಹಾನ್ ವಿಜ್ಞಾನಿ ಅಬ್ದುಲ್ ಕಲಾಂ. ಅವರ ಜೀವನದಿಂದ ಯುವಕರು ಪ್ರೇರಣೆ ಪಡೆಯಬೇಕು ಎಂದರು.

ಪ್ರಾಚಾರ್ಯ ಡಾ. ಎ.ಐ. ಮುಲ್ಲಾ ಮಾತನಾಡಿ, ಡಾ. ಕಲಾಂ ಜೀವನ ಪ್ರತಿಯೊಬ್ಬರಿಗೂ ಪಾಠವಾಗಬೇಕು ಎಂದರು.

ಪತ್ರಿಕೋದ್ಯಮದ ವಿಭಾಗದ ಮುಖ್ಯಸ್ಥ ಡಾ. ಎಸ್.ಎಸ್. ಆದೋನಿ, ಡಾ. ಎ.ಎಸ್. ಬಳ್ಳಾರಿ, ಬೋಧಕರು, ವಿದ್ಯಾರ್ಥಿಗಳು ಇದ್ದರು. ಅಸದುಲ್ಲಾ ಮಖಂದರ್ ಸ್ವಾಗತಿಸಿದರು. ಶ್ರುತಿ ಯಾವಗಲಮಠ ನಿರೂಪಿಸಿದರು. ಡಾ. ಎನ್.ಬಿ. ನಾಲತವಾಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net