ಡಾ.ಅಂಬೇಡ್ಕರ್‌ರ ಕೊಡುಗೆ ಅತ್ಯಮೂಲ್ಯ

1 HBD 1
ಹುಮನಾಬಾದ್ ತಾಲೂಕಿನ ಕನಕಟ್ಟಾದಲ್ಲಿ ಶುಕ್ರವಾರ ಡಾ.ಬಿ.ಆರ್. ಅಂಬೇಡ್ಕರ್ ನೂತನ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ಶ್ರೀ ಜ್ಞಾನ ಪ್ರಕಾಶ ಸ್ವಾಮಿ, ಭಂತೆ ದೇವನಾಮ ಪ್ರಿಯ, ಶ್ರೀ ರೇಣುಕ ವೀರ ಗಂಗಾಧರ ಶಿವಾಚಾರ್ಯ, ಶ್ರೀ ಸಿದ್ಧರಾಮ ಶರಣರು ಬೆಲ್ದಾಳ, ಭಂತೆ ಸಂಗಾನಂದ, ಸಚಿವ ರಹಿಮ್‌ಖಾನ್, ಮಾಜಿ ಸಚಿವ ರಾಜಶೇಖರ ಪಾಟೀಲ್, ಎಂಎಲ್ಸಿಗಳಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಇತರರಿದ್ದರು.
Published on

ಹುಮನಾಬಾದ್: ದೇಶದ ಸಂವಿಧಾನ ರಚನೆ ಮೂಲಕ ಡಾ.ಬಿ.ಆರ್.ಅಂಬೇಡ್ಕರ್​ ಅವರ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕನಕಟ್ಟಾ ಗ್ರಾಮದಲ್ಲಿ ಶುಕ್ರವಾರ ಡಾ.ಬಿ.ಆರ್. ಅಂಬೇಡ್ಕರ್‌ರ ನೂತನ ಮೂರ್ತಿ ಅನಾವರಣ ಕಾರ್ಯಕ್ರಮದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಕಂದಾಚಾರ, ಮೂಢನಂಬಿಕೆ, ಅಸಮಾನತೆ ತೊಡೆದು ಹಾಕಿ ನವಸಮಾಜ ನಿರ್ಮಾಣ ಮಾಡಿ ಎಲ್ಲರಿಗೂ ನಾಗರಿಕ ಹಕ್ಕು, ಮತದಾನದ ಹಕ್ಕು ನೀಡಿರುವ ಮಹಾನ್ ಪುರುಷ ಅಂಬೇಡ್ಕರ್. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸತ್ಪರ್ಜೆಗಳಾಗಿ ಬಾಳಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ಭಾರತ ಸಂವಿಧಾನದ ಮೀಸಲಾತಿಯಿಂದ ಪ್ರತಿಯೊಂದು ಸಮಾಜದ ಜನರಿಗೆ ಅಧಿಕಾರ, ಸಮಾನತೆ, ಸಾಮಾಜಿಕ ನ್ಯಾಯ ದೊರೆಯಲು ಸಾಧ್ಯವಾಗಿದೆ. ಸಂವಿಧಾನದಿಂದ ಅಧಿಕಾರಿ ಪಡೆದು ಅವರಿಗೆ ದ್ರೋಹ ಬಗೆಯುತ್ತಿರುವುದು ಇಂದು ಕೆಲವರಿಂದ ಕಾಣುತ್ತಿದ್ದೇವೆ. ಆದ್ದರಿಂದ ಜಾಗೃತಿ ವಹಿಸಿ ಅಂಬೇಡ್ಕರ್‌ರ ತತ್ವ ಪಾಲನೆ ಎಲ್ಲರೂ ಮಾಡಬೇಕೆಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮೈಸೂರಿನ ಊರಿಲಿಂಗ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮಿ, ಹಾಲಹಳ್ಳಿ ಬುದ್ಧ ವಿಹಾರದ ಭಂತೆ ದೇವನಾಮ ಪ್ರಿಯ, ಶ್ರೀ ರೇಣುಕ ವೀರ ಗಂಗಾಧರ ಶಿವಾಚಾರ್ಯ, ಭಂತೆ ಸಂಗಾನಂದ, ಶ್ರೀ ಸಿದ್ಧರಾಮ ಶರಣರು ಬೆಲ್ದಾಳ ಮಾತನಾಡಿದರು.

ಸಚಿವ ರಹೀಮ್‌ಖಾನ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಪ್ರಮುಖರಾದ ವೀರಣ್ಣ ಪಾಟೀಲ್, ಡಾ.ಅಪ್ಪಗೇರಿ ಸೋಮಶೇಖರ, ಲಕ್ಷ್ಮಣರಾವ ಬುಳ್ಳಾ, ರಮೇಶ ಡಾಕುಳಗಿ, ಬಾಬು ಟೈಗರ್, ಮಾರುತಿ ಬೌದ್ಧೆ, ಪ್ರಭುರಾವ ತಾಳಮಡಗಿ, ಮಲ್ಲಿಕಾರ್ಜುನ ಮಹೇಂದ್ರಕರ, ವೀರಪ್ಪ ಭೂತಾಳೆ, ಸುರೇಶ ಘಾಂಗ್ರೆ, ಶಿವಾನಂದ ಕಟ್ಟಮನಿ, ಗೌತಮ ಪ್ರಸಾದ, ಗಣಪತಿ ಅಷ್ಟೊರೆ, ರಾಹುಲ ಉದ್ದಾ, ಸುನೀಲ ಮುಡಬಿಕರ, ಶ್ರಾವಣ ವಾಗ್ದಾರೆ, ಪ್ರಕಾಶ ಪುಗಟೆ, ರಜನಿಕಾಂತ ಪೂಜಾರಿ, ಮಲ್ಲಿಕಾರ್ಜುನ ಸೋನಾರೆ, ಅಮರ ಮುತ್ತಂಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net