

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶವನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಕರೆ ನೀಡಿದರು.
ಕುಸನೂರ ರಸ್ತೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂವಿಧಾನದಿAದಾಗಿ ಇಂದು ದೇಶದ ಎಲ್ಲ ಪ್ರಜೆಗಳು ಶಾಂತಿ, ನೆಮ್ಮದಿಯಿಂದ ಬದುಕುವಂತಾಗಿದೆ. ಸಾಮಾಜಿಕ ನ್ಯಾಯ, ತುಳಿತಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಡಾ.ಅಂಬೇಡ್ಕರ್ ಅವರ ಪಾತ್ರ ಪ್ರಮುಖವಾಗಿದೆ ಎಂದರು.
ನಟ ಚೇತನ್ ಅಹಿಂಸಾ ಮಾತನಾಡಿ, ವಿದ್ಯಾರ್ಥಿಗಳಿಗೆ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳು ಮೂಲ ಪ್ರೇರಣೆಯಾಗಬೇಕು. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಯಶಸ್ಸು ಕಾಣಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲೆ ಡಾ.ಸವಿತಾ ತಿವಾರಿ ಅಧ್ಯಕ್ಷತೆ ವಹಿಸಿದ್ದರು. ಡಾ.ಟಿ.ವಿ.ಅಡವೇಶ, ಡಾ.ಮಲ್ಲೇಶಪ್ಪ ಕುಂಬಾರ, ಡಾ.ವಿನೋದಕುಮಾರ ರಾಠೋಡ, ಡಾ.ರಾಜಶೇಖರ ಮಡಿವಾಳ, ಡಾ.ವಿಜಯಾನಂದ ವಿಠ್ಠಲರಾವ್, ಡಾ.ವಿಶ್ವನಾಥ ಬೆಣ್ಣೂರ್, ಡಾ.ಭುವನೇಶ್ವರಿ, ಡಾ.ರೇಖಾ ಅಣ್ಣಿಗೇರಿ, ಡಾ.ಶ್ರೀಮಂತ ಹೋಳ್ಕರ್, ಪ್ರೊ.ಮೇರಿ ಮೆಥ್ಯೂಸ್, ಡಾ.ನಾಗಪ್ಪ ಗೋಗಿ, ಡಾ.ರವಿ ಬೌದ್ಧೆ, ಡಾ.ಶಿವಲಿಂಗಪ್ಪ ಪಾಟೀಲ್, ಡಾ.ದಿನೇಶ ಮೇತ್ರೆ, ಪ್ರೊ.ಭೀಮರಾಯ ಕೋತಲೆ, ಡಾ.ವಿಜಯಕುಮಾರ ಗೋಪಾಳೆ, ಪ್ರೊ.ಗೌಶಿಯಾ ಬೇಗಂ, ಡಾ.ನಶೀಮ್ ಫಾತಿಮಾ, ಡಾ.ಸುಹಾಸಿನಿ, ಡಾ.ಅರುಣಕುಮಾರ ಸಲಗರ, ಡಾ.ಶಾಮಲಾ ಸ್ವಾಮಿ, ಅಜಯಸಿಂಗ್ ತಿವಾರಿ, ಶಿವಾನಂದ ಸ್ವಾಮಿ ಇತರರಿದ್ದರು.
ಡಾ.ಬಲಭೀಮ ಸಾಂಗ್ಲಿ ಬರೆದಿರುವ ಇಂಡಿಯನ್ ಇಂಗ್ಲಿಷ್ ಶಾರ್ಟ್ ಸ್ಟೋರಿ ೧೯೭೫-೨೦೦೦ ಎ ಕ್ರಿಟಿಕಲ್ ಸರ್ವೆ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹಾಸ್ಯ ಚಟಾಕಿ ಹಾರಿಸುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಡಾ.ಅನುಸೂಯ ಗಾಯಕವಾಡ ಪ್ರಾರ್ಥಿಸಿದರು. ಡಾ.ವಿಜಯಕುಮಾರ ಸಾಲಿಮನಿ ಸ್ವಾಗತಿಸಿದರು. ಡಾ.ರಾಜಕುಮಾರ ಸಲಗರ ಅತಿಥಿ ಪರಿಚಯ ಮಾಡಿದರು. ಡಾ.ಚಂದ್ರಕಾAತ ಜಮಾದಾರ್ ಪ್ರಾಸ್ತಾವಿಕ ಮಾತನಾಡಿದರು. ಡಾ.ಸುರೇಶ ಮಾಳೇಗಾಂವ್ ಮತ್ತು ಡಾ.ಬಲಭೀಮ ಸಾಂಗ್ಲಿ ನಿರೂಪಣೆ ಮಾಡಿದರು.