

ಕೆ.ಆರ್.ನಗರ: ತಮಿಳುನಾಡಿನ ಈರೋಡ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಕೆಎಕೆಎಸ್ ಮೋಟಾರ್ ಸ್ಪೋರ್ಟ್ಸ್ ಡರ್ಟ್ ರೇಸ್‌ನಲ್ಲಿ ಅರ್ಮಾನ್ ಖಾನ್ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.
ಪಟ್ಟಣದ ಖ್ಯಾತ ಮೂಳೆ ತಜ್ಞ ಡಾ.ಮೆಹಬೂಬ್ ಖಾನ್ ಅವರ ಮೊಮ್ಮಗ 7 ವಷರ್ದ ಬಾಲಕ ಅರ್ಮಾನ್ ಖಾನ್ ಮೈಸೂರಿನ ಫಿನಿಕ್ಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ 2ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಕಳೆದ ತಿಂಗಳು ಬೆಂಗಳೂರು ಮತ್ತು ಮೂಡಿಗೆರೆಯಲ್ಲಿ ಆಯೋಜಿಸಿದ್ದ ಮೋಟಾರ್ ಸ್ಪೋರ್ಟ್ಸ್ ಡರ್ಟ್ ರೇಸ್‌ನಲ್ಲಿಯೂ ಪ್ರಥಮ ಸ್ಥಾನ ಗಳಿಸಿ, ಈರೋಡ್‌ನಲ್ಲಿ ನಡೆದ ರೇಸ್‌ನಲ್ಲೂ ಪ್ರಥಮ ಸ್ಥಾನ ಗಳಿಸುವ ಮೂಲಕ ಸತತ 3 ಬಾರಿಯ ಡರ್ಟ್ ಟ್ರ್ಯಾಕ್ ರೇಸ್‌ಗಳಲ್ಲಿ ಮೊದಲ ಸ್ಥಾನವನ್ನು ಪಡೆದು ಹ್ಯಾಟ್ರಿಕ್ ಸಾಧಕನಾಗಿ ಹೊರಹೊಮ್ಮಿದ್ದಾನೆ.
ಡಾ.ರಿಜ್ವಾನ್‌ಖಾನ್ ಮತ್ತು ನಿಶಾದ್ ಖಾನಂ ಅವರ ಮೊದಲನೇ ಪುತ್ರನಾದ ಅರ್ಮಾನ್ ಖಾನ್ ಪುಟ್ಟ ವಯಸ್ಸಿನಲ್ಲೇ ರಾಜ್ಯ ಮಟ್ಟದ ರೇಸ್‌ಗಳಲ್ಲಿ ಭಾಗವಹಿಸಿ ಜಯಗಳಿಸುವ ಮೂಲಕ ರಾಷ್ಟ್ರಮಟ್ಟದ ರೇಸ್ ರೈಡರ್ ಆಗುವ ಭರವಸೆ ಮೂಡಿಸಿದ್ದಾನೆ.
ಮಕ್ಕಳ ಆಸಕ್ತಿಯನ್ನು ಗಮನಿಸಿ ಬೆಂಬಲಿಸಿದರೆ ಅದರಲ್ಲೇ ತಮ್ಮನ್ನು ಅಳವಡಿಸಿಕೊಳ್ಳುತ್ತಾರೆ. ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಸಾಧನೆ ಸಾಧ್ಯ. ಈ ಬಗ್ಗೆ ತಂದೆ-ತಾಯಿಗಳು ಹೆಚ್ಚಿನ ಗಮನಹರಿಸಬೇಕು.
ಡಾ.ಮೆಹಬೂಬ್ ಖಾನ್ ಮೂಳೆತಜ್ಞ. ಕೆ.ಆರ್.ನಗರ