ಡಬ್ಗುಳಿ ರಸ್ತೆಯಲ್ಲಿ ಗುಡ್ಡ ಕುಸಿತ

12 ylp 03 (dabguli)
Published on

ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಬ್ಗುಳಿ ಬಳಿಯ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಒಂದು ಬದಿ ಹಳ್ಳದ, ಒಂದು ಬದಿ ಬೃಹತ್ ಗುಡ್ಡದ ನಡುವೆ ಹಾದು ಹೋಗಿರುವ ರಸ್ತೆಯ ಮೇಲೆ ಗುಡ್ಡ ಕುಸಿದಿದೆ. ಇದರಿಂದ ಓಡಾಟಕ್ಕೆ ತೊಂದರೆಯಾಗಿದೆ. ಗುಡ್ಡದ ಮಣ್ಣು, ಗಿಡ- ಮರಗಳು ರಸ್ತೆಯಲ್ಲಿ ಬಿದ್ದಿವೆ. ಗುತ್ತಿಗೆದಾರ ಆನಂದ ನಾಯ್ಕ ಅವರು ಜೆಸಿಬಿ ಯಂತ್ರದ ಮೂಲಕ ತಾತ್ಕಾಲಿಕವಾಗಿ ಮಣ್ಣು ತೆರವುಗೊಳಿಸಿದ್ದಾರೆ. ಆದರೆ, ಮಳೆ ಮುಂದುವರಿದ ಕಾರಣ ಕುಸಿತ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ. ಸತತ ನಾಲ್ಕು ವರ್ಷಗಳಿಂದ ಡಬ್ಗುಳಿಯಲ್ಲಿ ಮಳೆಗಾಲದಲ್ಲಿ ರಸ್ತೆ ಮೇಲೆ ಗುಡ್ಡ ಕುಸಿತ ಉಂಟಾಗುತ್ತಿದೆ. 2019ರಿಂದ ಪ್ರತಿ ವರ್ಷ ಗುಡ್ಡ ಕುಸಿಯುತ್ತಿದೆ. ಮಳೆ ಜೋರಾದರೆ ಗ್ರಾಮಸ್ಥರು ರಸ್ತೆಯಲ್ಲಿ ಓಡಾಡಲೂ ಭಯಪಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net