ಡಬಲ್​ ಇಂಜಿನ್​ ಸರ್ಕಾರ ಕೆಲಸ ಮಾಡ್ತಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿಕೆ

1
Published on

ತುಮಕೂರು: ವಿಧಾನಸಭೆ ಚುನಾವಣೆಗೆ 10 ತಿಂಗಳಿರುವಾಗಲೇ ಪಕ್ಷ ಸಂಟನೆಗೆ ಕಾಂಗ್ರೆಸ್​ ಸಜ್ಜಾಗಿದೆ. ನಗರ ಹೊರವಲಯದ ಡಾ.ಎಚ್​.ಎಂ.ಗಂಗಾಧರಯ್ಯ ಮೆಮೋರಿಯಲ್​ ಹಾಲ್​ನಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್​ ಸಮಿತಿ ಆಯೋಜಿಸಿದ್ದ ಜಿಲ್ಲಾಮಟ್ಟದ ನವ ಸಂಕಲ್ಪ ಶಿಬಿರಕ್ಕೆ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಚಾಲನೆ ನೀಡಿದರು.

ಸಮುದ್ರ ಮಂಥನದಂತೆ ವಿಷವನ್ನು ಕಡೆದು ಅಮೃತ ತೆಗೆಯುವ ಕೆಲಸ ಆಗಬೇಕಿದೆ. ಮನಸಲ್ಲಿ ಇರೋ ಏನೇನೋ ವಿಚಾರವನ್ನು ಬಿಟ್ಟು ಕಾಂಗ್ರೆಸ್​ ಅಧಿಕಾರಕ್ಕೆ ತರುವುದಷ್ಟೇ ನಮ್ಮ ಚಿಂತನೆಯಾಗಬೇಕು. ತುಮಕೂರು ಗೆದ್ದರೆ, ಇಡೀ ರಾಜ್ಯವನ್ನು ಗೆದ್ದಂತೆ ಎನ್ನುವ ಮಾತಿದೆ. ಜಿಲ್ಲೆಯಲ್ಲಿ ಎರಡಂಕಿ ದಾಟಿದರೆ ಪಕ್ಷವು ಅಧಿಕಾರ ಹಿಡಿಯುವುದು ನಿಶ್ಚಿತ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮುಖಂಡರು, ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸುವಂತೆ ಡಿ.ಕೆ.ಶಿವಕುಮಾರ್​ ಹೇಳುವ ಮೂಲಕ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

ಬಿಜೆಪಿ, ಜೆಡಿಎಸ್​ ಸರ್ಕಾರದ ಆಡಳಿತವನ್ನು ಜಿಲ್ಲೆಯ ಜನರು ನೋಡಿದ್ದಾರೆ. ಸಮರ್ಥ ಆಡಳಿತ ನೀಡಿರುವ ಕಾಂಗ್ರೆಸ್​ ಯೋಜನೆ ಬಗ್ಗೆ ಮನೆಮನೆಗೆ ತಿಳಿಸಬೇಕು ಎಂದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಐದು ವರ್ಷ ಮಾಡಿದ ಜನಪರ ಕೆಲಸಗಳನ್ನು ಡಬಲ್​ ಇಂಜಿನ್​ ಸರ್ಕಾರ ಮಾಡುತ್ತಿಲ್ಲ, ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್​ ಚಿಂತನ ಮಂಥನವನ್ನು ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗುತ್ತಿದೆ. ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಗ್ಯಾಸ್​, ಪೆಟ್ರೋಲ್​ ದರ ಗಗನಮುಖಿ ಆಗಿವೆ. ಆದರೆ, ರೈತರು ಬೆಳೆದ ಹಣ್ಣು, ತರಕಾರಿ, ಹಾಲಿನ ದರ ಏರಿಕೆ ಮಾಡುತ್ತಿಲ್ಲ, ಸಾಮಾನ್ಯ ಜನರ ಬದುಕಿನ ತಾರತಮ್ಯ ವಿಚಾರಗಳು ಶಿಬಿರಗಳಲ್ಲಿ ಚರ್ಚೆಯಾಗಬೇಕು ಎಂದು ಶಿವಕುಮಾರ್​ ತಿಳಿಸಿದರು.

ಸ್ವಪ್ರತಿಷ್ಠೆ ಬಿಡಿ: ಮನೆಗೆ ಬಂದ ಲಕ್ಷಿ$್ಮಯನ್ನು ಒಳಗೆ ಕರೆದುಕೊಳ್ಳಬೇಕು, ಸ್ವಪ್ರತಿಷ್ಠೆ ಬಿಟ್ಟು ಪಕ್ಷವನ್ನು ಸಶಕ್ತಗೊಳಿಸಬೇಕು. ಕಾಂಗ್ರೆಸ್​ ಎಲ್ಲವನ್ನೂ ಮುಖಂಡರಿಗೆ ನೀಡಿದೆ. ಈಗ ಪಕ್ಷಕ್ಕೆ ನಿಮ್ಮ ಕೊಡುಗೆ ಬೇಕಾಗಿದೆ. ನಿಮ್ಮ ತ್ಯಾಗ, ಸೇವೆ ಪಕ್ಷಕ್ಕೆ ಅತ್ಯವಶ್ಯಕವಾಗಿದೆ. ಎಲ್ಲರೂ ಒಟ್ಟಾಗಿ ಹೋರಾಡಿದರೆ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಡಿಕೆಶಿ ಹೇಳಿದರು.

ಶೇ.60ಕ್ಕಿಂತಲೂ ಹೆಚ್ಚು ಯುವಜನರನ್ನು ಹೊಂದಿರುವ ಭಾರತದ ಭವಿಷ್ಯದ ಹೇಗಿರಬೇಕು ಎಂಬ ನಿಟ್ಟಿನಲ್ಲಿ ಚಿಂತನೆ ನಡೆಸುವ ಉದ್ದೇಶದಿಂದ ನವ ಸಂಕಲ್ಪ ಶಿಬಿರ ಆಯೋಜಿಸಲಾಗಿದೆ. ಇದು ಒಂದು ರೀತಿಯಲ್ಲಿ ಕಾಂಗ್ರೆಸ್​ ಆತ್ಮಾವಲೋಕನ ಶಿಬಿರವೂ ಹೌದು. 270 ದಿನಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದ್ದು ನಮ್ಮಲಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಒಟ್ಟಿಗೆ ಹೋಗೋಣ ಎಂದು ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ತಿಳಿಸಿದರು.

ಬಡತನ, ನಿರುದ್ಯೋಗ, ಕೋಮುದಳ್ಳುರಿಯಲ್ಲಿ ಬೇಯುತ್ತಿರುವ ಭಾರತಕ್ಕೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಬೇಕಿದೆ. ರಾಜ್ಯದಲ್ಲಿ 40 ಪರ್ಸೆಂಟ್​ ಕಮಿಷನ್​ ಸರ್ಕಾರವಿದ್ದು ಇಂತಹ ಭ್ರಷ್ಟ ಸರ್ಕಾರವನ್ನು ನಾನೆಂದೂ ನೋಡಿಲ್ಲ. ಇದನ್ನು ಪ್ರತಿ ಮತದಾರನಿಗೆ ತಿಳಿಸುವ ಪ್ರಯತ್ನ ಪಕ್ಷದ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದರು. ಮಾಜಿ ಶಾಸಕರಾದ ಕೆ.ಷಡಕ್ಷರಿ, ಎಸ್​.ಷಪಿಅಹ್ಮದ್​, ಡಾ.ಎಸ್​.ರಫೀಕ್​ ಅಹ್ಮದ್​, ಬೆಮೆಲ್​ ಕಾಂತರಾಜು, ಮುಖಂಡರಾದ ಮುರಳೀಧರಹಾಲಪ್ಪ, ಬಿ.ಬಿ.ರಾಮಸ್ವಾಮಿಗೌಡ, ಸಾಸಲು ಸತೀಶ್​, ಕೆಂಚಮಾರಯ್ಯ, ಯುವ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆಮಠ್​ ಇದ್ದರು.

ಕಾಂಗ್ರೆಸ್​ ತಳಮಟ್ಟದ ಸಂಟನೆ ಹೊಂದಿದ್ದರೂ, ಜಿಲ್ಲೆಯಲ್ಲಿ ಒಗ್ಗಟ್ಟಿನ ಕೊರತೆಯಿಂದ ಬಹುತೇಕ ಕ್ಷೇತ್ರಗಳಲ್ಲಿ ಸೋಲು ಕಾಣುತ್ತಿದೆ. ಗುಬ್ಬಿ, ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರ ೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಅವಕಾಶವಿದ್ದರೂ, ಪಕ್ಷ ಅಲ್ಲಿ ನೆಲೆ ಕಂಡುಕೊಳ್ಳಲಾಗಿಲ್ಲ. ಇದಕ್ಕೆ ಸಮರ್ಥ ನಾಯಕತ್ವದ ಕೊರತೆಯೇ ಕಾರಣ. ಎಲ್ಲರೂ ಒಗ್ಗಟ್ಟಾಗಿ ದುಡಿದರೆ ಜಿಲ್ಲೆಯ ಕಾಂಗ್ರೆಸ್​ ಗತ ವೈಭವ ಕಾಣಬಹುದು. > ಆರ್​.ರಾಜೇಂದ್ರ ವಿಧಾನಪರಿಷತ್​ ಸದಸ್ಯ

ಸುಮ್ಮನೆ ಕೂರುವುದಲ್ಲ: ಕಾಂಗ್ರೆಸ್​ ಪಕ್ಷ ಬೇರೆ ಪಕ್ಷದಲ್ಲಿ ಶೂನ್ಯ. ಬೇರೆ ಪಕ್ಷಕ್ಕೆ ಹೋದವರಿಗೆ ಈ ಗತಿ ಬಂದಿದೆ. ಸಮೀಕ್ಷೆ ಒಂದರ ಪ್ರಕಾರ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್​ ಅಧಿಕಾರಕ್ಕೆ ಬರಲಿದೆ. ಹಾಗೆಂದು ಮೈಮರೆತು ಸುಮ್ಮನೆ ಕೂರುವುದಲ್ಲ. 78 ಲಕ್ಷ ಸದಸ್ಯತ್ವ ನೋಂದಣಿಯಾಗಿದ್ದು, ಇಡೀ ದೇಶದಲ್ಲೇ ನಮ್ಮ ರಾಜ್ಯ ಮೊದಲೆನಿಸಿದೆ. ಪ್ರತಿಬೂತ್​ ಮಟ್ಟದಲ್ಲಿ ನೈಜ ಸಮಿತಿ ರಚಿಸಲಾಗುವುದು. ಶಾಸಕರು, ಮಾಜಿ ಶಾಸಕರ ಮನೆಯಲ್ಲಿ ಕುಳಿತು ಸಮಿತಿ ರಚಿಸುವವರ ಅವಶ್ಯಕತೆ ಇಲ್ಲ. ಸರಿಯಾಗಿ ಕೆಲಸ ಮಾಡುವವರಿಗೆ ಮುಂದೆ ಅಧಿಕಾರ ದೊರೆಯಲಿದೆ. ಪಕ್ಷವನ್ನು ಸಶಕ್ತವಾಗಿಸುವ ನಿಟ್ಟಿನಲ್ಲಿ ನಿರಂತರ ಸದಸ್ಯತ್ವ ನೋಂದಣಿ ನಡೆಯಬೇಕು ಎಂದು ಡಿ.ಕೆ.ಶಿವಕುಮಾರ್​ ಖಡಕ್​ ಆಗಿ ಹೇಳಿದರು.

ನಾನೊಬ್ಬ ಅಪರಾಧಿ: ನವ ಸಂಕಲ್ಪ ಶಿಬಿರ ಉದ್ಘಾಟನೆಗೆ ಎಲ್ಲ ಮುಖಂಡರನ್ನು ವೇದಿಕೆಗೆ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಮಧ್ಯದಲ್ಲಿ ಕುಳಿತಿದ್ದ ಮಾಜಿ ಶಾಸಕ ಕೆ.ಎನ್​.ರಾಜಣ್ಣ ವೇದಿಕೆಗೆ ಬರಲು ಹಿಂದೇಟು ಹಾಕಿದರು. ಸಂಟಕರ ಆಹ್ವಾನದ ನಂತರ ವೇದಿಕೆ ಹತ್ತಿದ ರಾಜಣ್ಣ "ನಾನೊಬ್ಬ ಅಪರಾಧಿ. ನನ್ನ ಮೇಲೊಂದು ದೂರು ಹಾಕಿದ್ದಾರೆ. ಪಿರ್ಯಾದುದಾರನ (ಜಿಲ್ಲಾಧ್ಯಕ್ಷ ಆರ್​.ರಾಮಕೃಷ್ಣ) ಅಧ್ಯಕ್ಷತೆಯಲ್ಲಿ ಶಿಬಿರ ನಡೆಯುತ್ತಿರುವುದರಿಂದ ಶಿಸ್ತು ಪಾಲನೆ ಮಾಡುವ ಸಲುವಾಗಿ ವೇದಿಕೆ ಹತ್ತಲಿಲ್ಲ' ಎಂದು ಸಮಜಾಯಿಷಿ ನೀಡಿದರು.

ಜಾರ್ಜ್​ ಶೀಟ್​ ಸಲ್ಲಿಕೆಯಲ್ಲೂ ರಾಜಕಾರಣ: ಜಾರಿ ನಿರ್ದೇಶನಾಲಯ (ಇಡಿ)ದಿಂದ ಜಾರ್ಜ್​ ಶೀಟ್​ ಸಲ್ಲಿಕೆ ವಿಳಂಬವಾಗಿದ್ದು, ಅದರಲ್ಲೂ ರಾಜಕಾರಣ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಆರೋಪಿಸಿದರು.

ಇಡಿಯಿಂದ ದೆಹಲಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ದೋಷಾರೋಪ ಪಟ್ಟಿಯನ್ನು ಮೂರ್ನಾಲ್ಕು ವರ್ಷದ ಹಿಂದೆಯೇ ಅಂದರೆ, ನಾನು ಜೈಲಿನಲ್ಲಿ ಇದ್ದಾಗಲೇ ಹಾಕಬೇಕಿತ್ತು, ಬಹಳ ತಡವಾಗಿ ಸಲ್ಲಿಸುತ್ತಿದ್ದಾರೆ ಎಂದು ನಗರದಲ್ಲಿ ಸುದ್ದಿಗಾರರಿಗೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದರು.

ಡಿಕೆಶಿ ಪಠ್ಯಪುಸ್ತಕ ಪ್ರತಿ ಹರಿದಿದ್ದು ಹೊಸ ಸಂಸತಿಯಲ್ಲ, ಸಂವಿಧಾನ ಶಿಲ್ಪಿ ಅಂಬೇಡ್ಕರ್​ಗೆ, ಬಸವಣ್ಣಗೆ ಮಾಡಿದ ಅಪಮಾನ ಸಹಿಸಿಕೊಂಡು ಇರುವುದಿಕ್ಕೆ ಆಗಲ್ಲ. ಬಿ.ಸಿ.ನಾಗೇಶ್​ ಮನೆಯಲ್ಲಿ ಶಂಕರಾಚಾರ್ಯರ ೋಟೋ ಇಟ್ಟುಕೊಂಡಿದ್ದಾರೆ. ಶಂಕರಾ, ಸಂಕರಾ ಅಂತ ಬರೆದುಕೊಂಡಿದ್ದಾರೆ. ಶಂಕರಾಚಾರ್ಯರು ಎಂತಹ ಕೊಡುಗೆ ನೀಡಿದ್ದಾರೆ. ಕುವೆಂಪು, ನಾರಾಯಣಗುರು, ಭಗತ್​ಸಿಂಗ್​ಗೆ ಅವಮಾನ ಮಾಡಲಾಗಿದೆ. ವೇದಿಕೆಯಲ್ಲಿ ಸ್ವಾಮೀಜಿಗಳು ಇದ್ದರು, ಅದಕ್ಕೆ ಹರಿದು ಹಾಕಿದೆ, ಇಲ್ಲದಿದ್ದರೆ ಸುಟ್ಟು ಹಾಕುತ್ತಿದ್ದೆ ಎಂದು ಶಿವಕುಮಾರ್​ ತಿರುಗೇಟು ಕೊಟ್ಟರು.

ದಲಿತ ಸಿಎಂ ಕೂಗು ತಪ್ಪೇನಿಲ್ಲ. ಯಾಕೆ ಆಗಬಾರದು, ಪಕ್ಕೆ ಏನೆಲ್ಲಾ ಅನುಕೂಲ ಆಗುತ್ತೋ ಅದು ಚರ್ಚೆ ಆಗುತ್ತೆ. > ಡಿ.ಕೆ.ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net