

ಚಿತ್ರದುರ್ಗ: ಮಾದಕ ವಸ್ತು ಸೇವನೆ ವ್ಯಸನ ಆರೋಗ್ಯ, ಕೌಟುಂಬಿಕ,ಆರ್ಥಿಕ, ಸಾಮಾಜಿಕ ಮತ್ತಿತರ ಗಂಭೀರ ಸಮಸ್ಯೆಗಳಿಗೆ ಕಾರಣವಾಗುವುದ ರೊಂದಿಗೆ ದೇಶದ ಭದ್ರತೆ ಧಕ್ಕೆ ಉಂಟು ಮಾಡಲಿದೆ ಎಂದು ಎಸ್‌ಪಿ ಧರ್ಮೇಂದರ್‌ಕುಮಾರ್‌ಮೀನಾ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್‌ಇಲಾಖೆ, ಕೋಟೆ ಪೊಲೀಸ್ ಠಾಣೆ ಸಂಯುಕ್ತಾಶ್ರಯದಲ್ಲಿ ಅಪರಾಧ ಮಾಸಾಚರಣೆ ಅಂಗವಾಗಿ ನಗರದ ಶ್ರೀ ಬಸ ವೇಶ್ವರ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಬುಧವಾರ ‘ನಶೆ ಮುಕ್ತ ಚಿತ್ರದುರ್ಗ’ ಮಾದಕ ವಸ್ತು ಬಳಕೆ ಮತ್ತು ಪೂರೈಕೆ ವಿರುದ್ಧ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ವಿಶೇಷ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಯುವಶಕ್ತಿ ನಮ್ಮ ದೇಶದ ಅಮೂಲ್ಯ ಸಂಪತ್ತು. ಶತ್ರು ರಾಷ್ಟ್ರಗಳು ದೇಶಕ್ಕೆ ಮಾದಕ ವಸ್ತುಗಳನ್ನು ಅಕ್ರಮವಾಗಿ ಪೂರೈಸುವ ಮೂಲಕ ಯುವ ಶಕ್ತಿ ನಾಶಕ್ಕೆ, ಆರ್ಥಿಕ ಸಂಪತ್ತಿನ ಕೊಳ್ಳೆಗೆ ಡಗ್ರ್ಸ್‌ಅಸ್ತ್ರ ಬಳಸಲು ಸಂಚು ಹಾಕುತ್ತಿರುತ್ತವೆ. ಮಾದಕ ವಸ್ತು ಬಳಕೆ, ಸಂಗ್ರಹ, ಮಾರಾ ಟ, ಆರೋಪಿತರು ಕಠಿಣ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ.
ಪೊಲೀಸ್ ಸೇರಿದಂತೆ ದೇಶದ ನಾನಾ ತನಿಖಾ ಸಂಸ್ಥೆಗಳು ಮಾದಕ ವಸ್ತು ಸೇವನೆ, ಪೂರೈಕೆ ವಿರುದ್ಧ ಸದಾ ಕಣ್ಗಾವಲು ಇರಿಸಿವೆ. ಮಾ ದಕ ವಸ್ತು ಸೇವಿಸುವಂಥವರು, ಪೆಡ್ಲರ್‌ಗಳು, ತನಿಖಾ ಸಂಸ್ಥೆಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆರೋಗ್ಯ ಮತ್ತು ಸಾ ಮಾಜಿಕ ಸುರಕ್ಷತೆಗಾಗಿ ಮಾದಕ ವಸ್ತು ಸೇವನೆಯಿಂದ ದೂರುವಿರುವುದು ಅತ್ಯಂತ ಉತ್ತಮ.
ಈ ಕುರಿತಂತೆ ಲಭ್ಯ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಬೇಕು, ನಾಗರಿಕರು ಕೈ ಜೋಡಿಸಿದರೆ ಮಾದಕ ವಸ್ತು ಮಾರಾಟ ದಂಧೆ ನಿಯಂತ್ರಣ ಸಾಧ್ಯ. ಹಣ ದ್ವಿಗುಣ, ಉದ್ಯೋಗ ಮೊದಲಾದ ಆಮಿಷಗಳನ್ನೊಡ್ಡಿ ಹಣ ದೋಚುವ ಆನ್‌ಲೈನ್ ವಂಚಕರ ವಿರು ದ್ಧವೂ ನಾಗರಿಕರು ಎಚ್ಚರಿಂದ ಇರಬೇಕು.
ಹೆಲ್ಮೆಟ್,ಸೀಟ್‌ಬೆಲ್ಟ್ ಧರಿಸುವ ಮೂಲಕ ವಾಹನಗಳನ್ನು ಎಚ್ಚರಿಕೆಯಿಂದ ಚಲಾಯಿಸಬೇಕು. ತಲೆಗೆ ಪೆಟ್ಟು ಬಿದ್ದರೆ ಜೀವ ರಕ್ಷಣೆ ಕಠಿ ಣ ಎಂಬುದನ್ನು ದ್ವಿಚಕ್ರ ಸವಾರರ ಅರಿತು ಕೊಳ್ಳ ಬೇಕೆಂದರು. ಈ ವೇಳೆ ಅವರು ಇಲಾಖೆ ಹೊರ ತಂದಿರುವ ಕಿರುಹೊತ್ತಿಗೆ ಅರಿವಿನ ದೀವಿಗೆ ಬಿಡುಗಡೆ ಮಾಡಿದರು.
ಬಸವೇಶ್ವರ ವೈದ್ಯಕೀಯ ಕಾಲೇಜು ವಿಧಿವಿಜ್ಞಾನ ವಿಭಾಗದ ಎಚ್‌ಒಡಿ ಡಾ.ಎಸ್.ಕೃಷ್ಣ ಮಾತನಾಡಿ, ತಂಬಾಕು, ಮದ್ಯ, ಗಾಂಜಾ, ಅ ಫೀಮು, ಬ್ರೌನ್‌ಶುಗುರ್, ಎಲ್‌ಡಿಎಸ್ ಮೊದಲಾದ ಮಾದಕ ವಸ್ತುಗಳಿಂದ ಮನುಷ್ಯನ ಆರೋಗ್ಯ ಮೇಲೆ ಉಂಟಾಗುವ ದುಷ್ಪರಿಣಾ ಮಗಳನ್ನು ವಿವರಿಸಿದರು. ಮಾದಕ ವಸ್ತು ಸೇವನೆ ವ್ಯಸನಿ ತನ್ನ ಹಾಗೂ ಸಮಾಜದ ನಡುವೆ ಕಂದಕ ಸೃಷ್ಟಿಸಿಕೊಳ್ಳುತ್ತಾನೆ. ಖಿನ್ನತೆಯಿಂದ ಆತ್ಮಹತ್ಯೆಗೆ ಮುಂದಾಗಬಹುದು. ಹಿಂಸಾತ್ಮಕ ಅಪರಾಧ ಕೃತ್ಯಗಳಲ್ಲೂ ಆತ ಭಾಗಿಯಾಗಬಹುದೆಂದರು.
ಸಿಇಎನ್ ಠಾಣೆ ಪಿಐ ಎಸ್.ವೆಂಕಟೇಶ್ ಮಾತನಾಡಿ, ಮಾದಕ ವಸ್ತುಗಳ ಸೇವನೆ, ಸಂಗ್ರಹಿಸುವ,ಸಾಗಿಸುವಂಥ ಕೃತ್ಯಗಳಿಗೆ ಇರುವ ಶಿ ಕ್ಷೆ ಪ್ರಮಾಣ ವಿವರಿಸಿದರು. ಎನ್‌ಡಿಪಿಎಸ್ ಕಾಯ್ದೆ 1985ರಡಿ ಪ್ರಕರಣಗಳಲ್ಲಿ ಶಿಕ್ಷಿತರಾದವರ ಸಂಖ್ಯೆ ಹೆಚ್ಚಿದೆ ಎಂದರು. ವೈದ್ಯಕೀಯ ಕಾ ಲೇಜು ಅಧೀಕ್ಷ ಡಾ.ಎಲ್.ಫಾಲಾಕ್ಷಯ್ಯ, ಡೀನ್ ಡಾ.ಜಿ.ಪ್ರಶಾಂತ್,ಸಮುದಾಯದ ಔಷಧ ವಿಭಾಗದ ಎಚ್‌ಒಡಿ ಡಾ.ನಾಗೇಂದ್ರಗೌ ಡ, ಕೋಟೆ ಠಾಣೆ ಪಿಐ ದೊಡ್ಡಣ್ಣ ಇದ್ದರು. ವರ್ಷಿಣಿ ಪ್ರಾರ್ಥಿಸಿದರು. ಡಾ.ಅಮೃತಾ ನಿರೂಪಿಸಿದರು.