

ವಿಜಯವಾಣಿ ಸುದ್ದಿಜಾಲ ಇಳಕಲ್ಲ(ಗ್ರಾ)
ನಗರದ ಅಂಚೆ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಚೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಡಾಕ್ ನಿರ್ಯಾತ ಸೇವಾಕೇಂದ್ರಕ್ಕೆ ಚಾಲನೆ ನೀಡಲಾಯಿತು.
ನಗರದ ಸೀರೆ ವ್ಯಾಪಾರಸ್ಥ ವಿಜಯಕುಮಾರ ಗುಳೇದ ಶ್ರೀನಿವಾಸ ಕಾಳಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಗಲಕೋಟೆಯ ಅಂಚೆ ಆಧೀಕ್ಷಕ ಶಂಕರ ಬಸರಕೋಡ ಮಾತನಾಡಿ, ಬಾಗಲಕೋಟೆ ಹಾಗೂ ಇಳಕಲ್ಲದಲ್ಲಿ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸ್ಥಳೀಯ ಅಂಚೆ ಅಧಿಕಾರಿ ಅಶ್ವಿನಿ ಸಾಳುಂಕೆ ಅಧ್ಯಕ್ಷತೆ ವಹಿಸಿದ್ದರು.
ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಗ್ರೇಡ್-2 ತಹಸೀಲ್ದಾರ್ ಈಶ್ವರ ಗಡ್ಡಿ, ಪಿಎಸ್‌ಐ ಎಸ್.ಆರ್. ನಾಯಕ, ಸ್ಪಂದನ ಕಾಲೇಜು ಪ್ರಾಚಾರ್ಯ ಅಮರೇಶ ಕೌದಿ, ಕನ್ನಡ ಸಾಹಿತ್ಯ ಪರಿಷತ್ತ ಮಾಜಿ ಜಿಲ್ಲಾಧ್ಯಕ್ಷ ವಿಶ್ವನಾಥ ವಂಶಾಕೃತಮಠ, ಅಮ್ಮಾ ಸಂಸ್ಥೆಯ ಚೇರ್ಮನ್ ಪುರುಷೋತ್ತಮ ದರಕ ಇತರರಿದ್ದರು.