ದೇವರ ಹೆಸರಿನಲ್ಲಿ ಮೂಢನಂಬಿಕೆ ಸರಿಯಲ್ಲ

21 NRD-1
Published on

ನರಗುಂದ: ಡಿಎಸ್‌ಎಸ್, ಮಾನವ ಬಂಧುತ್ವ ವೇದಿಕೆ ವತಿಯಿಂದ ಪಟ್ಟಣದ ಸ್ನೇಹ ಸಂಜೀವಿನಿ ನಿರ್ಗತಿಕರ ವೃದ್ಧಾಶ್ರಮದಲ್ಲಿ ಸೋಮವಾರ ಬಸವಪಂಚಮಿ ಆಚರಿಸಲಾಯಿತು.

ಡಿಎಸ್‌ಎಸ್ ಸಂಘಟನೆ ತಾಲೂಕಾಧ್ಯಕ್ಷ ದತ್ತು ಜೋಗಣ್ಣವರ ಮಾತನಾಡಿ, ನಾವು ತಿನ್ನುವ ಆಹಾರವನ್ನು ಮೂಢನಂಬಿಕೆಗೆ ಒಳಗಾಗಿ ಪೋಲು ಮಾಡಬಾರದು. ಹಸಿದವರಿಗೆ ನೀಡಬೇಕು. ಹಬ್ಬದ ದಿನಗಳನ್ನು ಎಲ್ಲರೂ ಒಂದಾಗಿ ಆಚರಿಸಬೇಕು. ದೇವರ ಹೆಸರಿನಲ್ಲಿ ನಡೆಯುತ್ತಿರುವ ಮೂಢನಂಬಿಕೆ ಹೋಗಲಾಡಿಸಲು ಎಲ್ಲರೂ ಶಿಕ್ಷಣವಂತರಾಗಬೇಕಿದೆ ಎಂದು ತಿಳಿಸಿದರು. ಬಾಲರಾಜ ದೊಡ್ಡಮನಿ, ಮೈಲಾರಪ್ಪ ಹಿರೇಮನಿ, ಮಂಜು ದೊಡ್ಡಮನಿ, ಮಹಾಂತೇಶ ಪೂಜಾರ, ದೇವಪ್ಪ ಮಾದರ, ಶಿವಾನಂದ ಮಾದರ, ಬಸವರಾಜ್ ಜೋಗನ್ನವರ, ಗುರುನಾಥ ಕೆಂಗಾರಕರ, ಡಿಎಸ್‌ಎಸ್ ಮತ್ತು ಮಾನವ ಬಂಧುತ್ವ ವೇದಿಕೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net