ಡಂಬಳದಲ್ಲಿ ಪ್ರವಾಸಿಗರ ಕಲರವ

15DBL-1
Published on

ಡಂಬಳ: ಮಕರ ಸಂಕ್ರಾಂತಿ ನಿಮಿತ್ತ ಬುಧವಾರ ಡಂಬಳ ಪ್ರವಾಸಿಗರ ಕಲರವದಿಂದ ಕಂಗೊಳಿಸುತ್ತಿತ್ತು.

ಬೆಳಗ್ಗೆಯಿಂದಲೇ ವಿವಿಧ ಭಾಗಗಳಿಂದ ಕುಟುಂಬ ಸಮೇತರಾಗಿ ಡಂಬಳಕ್ಕೆ ಆಗಮಿಸಿದ ಸಾವಿರಾರು ಪ್ರವಾಸಿಗರು, ಐತಿಹಾಸಿಕ ತಾಣಗಳಾದ ದೊಡ್ಡ ಬಸವೇಶ್ವರ, ಸೋಮೇಶ್ವರ ದೇವಾಲಯ, ತೋಂಟದಾರ್ಯ ಮಠ, ಜಪದ ಬಾವಿ, ವಿಕ್ಟೋರಿಯಾ ಮಹಾರಾಣಿ ಕೆರೆ ವೀಕ್ಷಣೆ ಮಾಡಿದರು.

ವಿಕ್ಟೋರಿಯಾ ಮಹಾರಾಣಿ ಕೆರೆ ಭರ್ತಿಯಾಗಿರುವ ಕಾರಣ ಜನತೆ ಅಲ್ಲಿ ಸ್ನಾನ ಮಾಡಿ ಸಂಭ್ರಮಿಸಿದರು. ದೊಡ್ಡ ಬಸವೇಶ್ವರ ದೇವಾಲಯ ಆವರಣದಲ್ಲಿ ಕುಳಿತುಕೊಂಡು ಮನೆಯಿಂದ ತಂದ ಎಳ್ಳು- ಶೇಂಗಾ ಹೋಳಿ, ಬಗೆಬಗೆಯ ಆಹಾರ ಪದಾರ್ಥಗಳನ್ನು ಸವಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net