ಡಾ. ಟಿ.ವಿ. ಅರಳಿಕಟ್ಟಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

Avirodha aaike
ಡಾ. ಟಿ.ವಿ. ಅರಳಿಕಟ್ಟಿ
Published on

ಮುಧೋಳ: ಜಿಲ್ಲೆಯ ಪ್ರತಿಷ್ಠಿತ ಮುಧೋಳ ಪಟ್ಟಣ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ಸಂಸ್ಥೆ ಅಧ್ಯಕ್ಷರಾಗಿ ಡಾ. ಟಿ.ವಿ. ಅರಳಿಕಟ್ಟಿ ಅವಿರೋಧವಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ರಾಜೇಶ್ವರಿ ಕೋಮಾರ, ನಿರ್ದೇಶಕರಾಗಿ ರಮೇಶ ಜೀರಗಾಳ, ವೆಂಕಟೇಶ ನಾಯಿಕ, ರಂಗಪ್ಪ ನಾಡಗೌಡರ, ಪಾಂಡಪ್ಪಗೌಡ ಬಿ. ಪಾಟೀಲ, ಭೀಮಪ್ಪ ಕೆಂಚರಡ್ಡಿ, ವಿಠ್ಠಲ ಕೆಂಚಪ್ಪಗೋಳ, ಕೃಷ್ಣಾ ಚಿಕ್ಕನ್ನವರ, ಜ್ಯೋತಿ ಕಣಬೂರ, ಲಕ್ಷ್ಮೀ ನಾಯಿಕ, ರಾಜೇಶ್ವರಿ ರಾಘಾ, ದುಂಡಪ್ಪ ದಾಸರಡ್ಡಿ, ನಿಂಗಪ್ಪ ಹಳ್ಳದ, ವೆಂಕನಗೌಡ ನಾಡಗೌಡರ, ಚಂದ್ರಶೇಖರ ಚಿಪ್ಪಲಕಟ್ಟಿ, ಸವಿತಾ ನಿಂಬರಗಿ ಆಯ್ಕೆಯಾಗಿದ್ದಾರೆ.

ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜ, ಅತ್ಯುತ್ತಮ ಆರ್ಥಿಕ ತಜ್ಞ ಪ್ರಶಸ್ತಿ ಪುರಸ್ಕೃತ, ಬಿಡಿಸಿಸಿ ಬ್ಯಾಂಕ್‌ನಲ್ಲಿ 23 ವರ್ಷಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತರಾದ ಹಾಗೂ ಅರ್ಥಶಾಸದಲ್ಲಿ ಸ್ನಾತಕೋತ್ತರ ಪದವೀಧರ, ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಸಾಧನೆ ಮಾಡಿ ಮುಧೋಳ ತಾಲೂಕಿನ ಆರ್ಥಿಕ ಸುಧಾರಣೆಯಲ್ಲಿ ಪ್ರಸಿದ್ಧಿ, ಅಪಾರ ಅನುಭವ ಹೊಂದಿರುವ ಆರ್ಥಿಕ ತಜ್ಞ ಡಾ. ಟಿ.ವಿ.ಅರಳಿಕಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು ಸಂತಸ ತಂದಿದೆ ಎಂದು ಆಡಳಿತ ಮಂಡಳಿ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net