ಠೇವಣಿ ಸಂಗ್ರಹ, ಸಾಲ ವಸೂಲಾತಿ ಮಾಡಿ : ಸಿಬ್ಬಂದಿಗೆ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಗೋವಿಂದಗೌಡ ತಾಕೀತು

1
Published on

ಕೋಲಾರ: ರೈತ, ಮಹಿಳೆ, ಬೀದಿಬದಿ ವ್ಯಾಪಾರಿಗಳೂ ಸೇರಿ ಸಹಸ್ರಾರು ಕುಟುಂಬಗಳಿಗೆ ಆಸರೆಯಾಗಿರುವ ಬ್ಯಾಂಕ್​, ನಿಮಗೂ ಉದ್ಯೋಗ ಕಲ್ಪಿಸಿಕೊಟ್ಟು ಬದುಕು ಕಟ್ಟಿಕೊಳ್ಳಲು ಕಾರಣವಾಗಿದೆ. ಅಂತಹ ಬ್ಯಾಂಕ್​ನ ಪ್ರಗತಿಗೆ ನಿಮ್ಮ ಕೊಡುಗೆ ಏನು ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಠೇವಣಿ ಸಂಗ್ರಹ, ಸಾಲ ವಸೂಲಾತಿ, ಗಣಕೀಕೃತ ಲೆಕ್ಕಪರಿಶೋಧನೆಗೆ ನೀಡಿರುವ ಗುರಿ ಸಾಧಿಸಲು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಿಬ್ಬಂದಿಗೆ ತಾಕೀತು ಮಾಡಿದರು.

ನಗರದ ಜಿಲ್ಲಾ ಸಹಕಾರಿ ಯೂನಿಯನ್​ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಬ್ಯಾಂಕ್​ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕ್​ ನಿಮ್ಮೆಲ್ಲ ಬೇಡಿಕೆ ಈಡೇರಿಸಿದೆ. ನಿಮಗೆ ಕೇಳಿದಷ್ಟು ವೇತನ ಭತ್ಯೆ, ಆರೋಗ್ಯ ವಿಮೆ ನೀಡಿದ್ದೇವೆ. ಆದರೂ ನಿಮ್ಮಲ್ಲಿ ಇನ್ನೂ ಬದ್ಧತೆ ಮೂಡಿಲ್ಲ. ದಿವಾಳಿಯಾಗಿ ಜನರ ಮನಸ್ಸಿನಿಂದಲೇ ದೂರವಾಗಿದ್ದ ಬ್ಯಾಂಕ್​ ಅನ್ನು ಪ್ರಸ್ತುತ ಪ್ರಗತಿಯತ್ತ ತಂದಿದ್ದೇವೆ. ಇದನ್ನು ಕೆಲವರಿಂದ ಸಹಿಸಲು ಸಾಧ್ಯವಾಗುತ್ತಿಲ್ಲ, ವಿನಾಕಾರಣ ಬ್ಯಾಂಕಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಬ್ಯಾಂಕಿನ ಋಣದಲ್ಲಿರುವ ಸಿಬ್ಬಂದಿ ಇದೆಲ್ಲವನ್ನು ಮೆಟ್ಟಿನಿಂತು ಬ್ಯಾಂಕಿನ ಘನತೆ ಹೆಚ್ಚಿಸಲು ಶ್ರಮಿಸುವ ಅಗತ್ಯವಿದೆ ಎಂದರು.

ಬ್ಯಾಂಕ್​ ಅನ್ನು ಉಳಿಸೋದು, ಹಾಳು ಮಾಡೋದು ಎರಡೂ ನಿಮ್ಮ ಕೈಯಲ್ಲೇ ಇದೆ. ಬ್ಯಾಂಕ್​ ಚೆನ್ನಾಗಿದ್ದರೆ ಮಾತ್ರ ನಿಮಗೆ ಕಾಲಕಾಲಕ್ಕೆ ವೇತನ ಭತ್ಯೆ ಸಿಗುತ್ತದೆ ಎಂಬುದನ್ನು ಮರೆಯಬಾರದು. ನಿರ್ಲಕ್ಷ$್ಯ ತೋರದೆ ಠೇವಣಿ ಸಂಗ್ರಹದ ಗುರಿ ಸಾಧಿಸಬೇಕು. ಕಚೇರಿಯಲ್ಲಿ ಕಾಲ ಕಳೆಯುವ ಬದಲಿಗೆ ಸಾಲ ಪಡೆದವರ ಮನೆಗಳಿಗೆ ಹೋಗಿ ವಸೂಲಾತಿ ಮಾಡಿ ಎಂದು ಸೂಚಿಸಿದರು.

5 ಶಾಖೆ ಆಡಿಟ್​ ರ್ಪೂಣ: ಗಣಕೀಕೃತ ಆಡಿಟ್​ ರ್ಪೂಣಗೊಳಿಸಿ ಆನ್​ಲೈನ್​ ಬ್ಯಾಂಕಿಂಗ್​ನಲ್ಲಿ ಪ್ರಗತಿ ಸಾಧಿಸಿರುವ ಅವಿಭಜಿತ ಜಿಲ್ಲೆಯ 5 ಶಾಖೆಗಳಾದ ಗೌರಿಬಿದನೂರು, ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು, ಶಿಡ್ಲಘಟ್ಟ ಶಾಖೆಗಳ ಅಧಿಕಾರಿ, ಸಿಬ್ಬಂದಿಯನ್ನು ಅಭಿನಂದಿಸಿ ಮಾತನಾಡಿದ ಗೋವಿಂದಗೌಡ, ಬ್ಯಾಂಕಿಂಗ್​ ವ್ಯವಸ್ಥೆಯಲ್ಲಿ ್ಯಾಕ್ಸ್​ಗಳ ಗಣಕೀಕರಣದಿಂದ ಗ್ರಾಹಕರಿಗೆ ಪಾರದರ್ಶಕವಾಗಿ ವಹಿವಾಟಿನ ಸಂದೇಶ ಒದಗಿಸಲಾಗುತ್ತಿದೆ. ವಾರದೊಳಗೆ ಅವಿಭಜಿತ ಜಿಲ್ಲೆಯ ಉಳಿದೆಲ್ಲ ಶಾಖೆಗಳು ರ್ಪೂಣ ಪ್ರಮಾಣದಲ್ಲಿ ್ಯಾಕ್ಸ್​ಗಳ ಗಣಕೀಕೃತ ಆಡಿಟ್​ ಮುಗಿಸಿರಬೇಕು. ಆಯಾ ದಿನದ ವಹಿವಾಟು ಆಯಾ ದಿನವೇ ಅಪ್​ಡೇಟ್​ ಆಗುವುದರಿಂದ ಅವ್ಯವಹಾರದ ಆರೋಪಗಳಿಗೆ ಕಡಿವಾಣ ಬೀಳಲಿದೆ ಎಂದರು.

ಬ್ಯಾಂಕ್​ ಎಜಿಎಂಗಳಾದ ಎಂ.ಆರ್​.ಶಿವಕುಮಾರ್​, ಖಲೀಮುಲ್ಲಾ, ಹುಸೇನ್​ಸಾಬ್​ ದೊಡ್ಡಮುನಿ, ಬೈರೇಗೌಡ, ಅರುಣ್​ಕುಮಾರ್​, ಭಾನುಪ್ರಕಾಶ್​, ನಾಗೇಶ್​, ವಿ-ಸಾಫ್ಟ್​ ಸಿಬ್ಬಂದಿ ರಾಜಶೇಖರ್​, ಫರ್ನಾಂಡೀಸ್​ ಮತ್ತಿತರರು ಇದ್ದರು.

ಗ್ರಾಹಕ ಸ್ನೇಹಿಯಾಗಿರಲಿ: ಬ್ಯಾಂಕ್​ನ ಎಲ್ಲ ಶಾಖೆಗಳನ್ನು ವಾಣಿಜ್ಯ ಬ್ಯಾಂಕುಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಆಧುನೀಕರಿಸಲಾಗಿದೆ. ಆದರೆ ಕೆಲವು ಶಾಖೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಗ್ರಾಹಕರಿಗೆ ಶಾಖೆಗಳು ಆಕಷಿರ್ಸುವಂತಿರಬೇಕು. ಕೆಲವು ಶಾಖೆಗಳಲ್ಲಿ ದೂಳು, ಹಳೆಯ ಕಡತಗಳ ರಾಶಿ ಇರುವುದು ಕಂಡುಬಂದಿದೆ. ಶಾಖಾ ವ್ಯವಸ್ಥಾಪಕರು ಮಾಡುತ್ತಿರುವುದಾದರೂ ಏನು? ಸ್ವಚ್ಛತೆ ಇಲ್ಲದೆ, ಗ್ರಾಹಕರಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸದಿದ್ದರೆ ಸಹಿಸುವುದಿಲ್ಲ ಎಂದು ಗೋವಿಂದಗೌಡ ಎಚ್ಚರಿಸಿದರು.

ಬೇಜವಾಬ್ದಾರಿ ವಿರುದ್ಧ ಬೇಸರ: ಸಿಬ್ಬಂದಿಯ ಬೇಜವಾಬ್ದಾರಿ ವಿರುದ್ಧ ಸಿಡಿದೆದ್ದ ಗೋವಿಂದಗೌಡ ಸಭೆಯಿಂದ ಹೊರ ನಡೆದಿದ್ದು, ಎಲ್ಲ 12 ಶಾಖೆಗಳ ವ್ಯವಸ್ಥಾಪಕರು, ಅವರಿಗೆ ಮನವಿ ಮಾಡಿ, ಮುಂದಿನ ದಿನಗಳಲ್ಲಿ ಬ್ಯಾಂಕ್​ ಪ್ರಗತಿಗೆ ಧಕ್ಕೆ ಬಾರದಂತೆ ಎಚ್ಚರಿಕೆ, ಬದ್ಧತೆಯಿಂದ ಕರ್ತವ್ಯನಿರ್ವಹಿಸುವ ಭರವಸೆ ನೀಡಿ ಸಭೆಗೆ ವಾಪಸು ಕರೆತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net