ಟ್ರ್ಯಾಕ್ಟರ್‌ನಲ್ಲಿ ಟಿಂಬರ್ ಸಾಗಿಸಲು ಅಡ್ಡಿಪಡಿಸದಂತೆ ಮನವಿ

18 ckm 1
ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ರೈತ ಸಂಘದ ಮುಖಂಡರು ಟ್ರ್ಯಾಕ್ಟರ್‌ಗಳಲ್ಲಿ ಟಿಂಬರ್‌ ಸಾಗಿಸಲು ಅಡ್ಡಿಪಡಿಸಬಾರದು ಎಂದು ಒತ್ತಾಯಿಸಿದರು. ಡಿ.ಮಹೇಶ್‌, ಗುರುಶಾಂತಪ್ಪ, ಕುಮಾರ ಸ್ವಾಮಿ, ದೇವರಾಜು ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕಾಫಿ ತೋಟಗಳಲ್ಲಿ ಟಿಂಬರ್ ಸಾಗಿಸಲು ಟ್ರ್ಯಾಕ್ಟರ್‌ಗಳಿಗೆ ಆರ್ ಟಿಓ ಇಲಾಖೆ ಅಡ್ಡಿಪಡದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ಮುಖಂಡರು ಶನಿವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ತೋಟದಿಂದ ಟಿಂಬರ್ ಸಾಗಿಸಲು ಟ್ರ್ಯಾಕ್ಟರ್ ಮಾಲೀಕರು ಒಪ್ಪದಿರುವ ಸಂದರ್ಭದಲ್ಲಿ, ತೋಟದ ಹಾಗೂ ಟಿಂಬರ್ ಮಾಲೀಕರು ಸೇರಿ ಲಿಖಿತವಾಗಿ ೨೦ ಕಿ.ಮೀ.ವರೆಗೆ ಟ್ರ್ಯಾಕ್ಟರ್ ಮುಖಾಂತರ ಸಾಗಿಸಲು ಒಪ್ಪಂದ ಮಾಡಿಕೊಂಡಿರುತ್ತಾರೆ ಎಂದು ಹೇಳಿದರು.

ಈಗಾಗಲೇ ಅನೇಕ ವರ್ಷಗಳಿಂದ ಕಾಫಿ ತೋಟಗಳಿಂದ ಟಿಂಬರ್ ಸಾಗಿಸಲು ಟ್ರ್ಯಾಕ್ಟರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಭಾರೀ ವಾಹನಗಳು ಕಾಫೀ ತೋಟಗಳಲ್ಲಿ ಓಡಾಡಲು ಸಾಧ್ಯವಿಲ್ಲದ ಕಾರಣ ತೋಟದ ಮಾಲೀಕರು, ಟಿಂಬರ್ ವ್ಯಾಪಾರಸ್ಥರು ಖಾಸಗಿ ರೈತರ ಟ್ರ್ಯಾಕ್ಟರ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾ ರೆ ಎಂದರು.

೨೦ ಕಿ.ಮೀ. ದೂರದವರೆಗೆ ಟ್ರ್ಯಾಕ್ಟರ್‌ಗಳನ್ನು ಬಳಕೆ ಮಾಡಿಕೊಳ್ಳಲು ಅಡ್ಡಿಪಡಿಸಿರಲಿಲ್ಲ. ಆದರೀಗ ಲಾರಿ ಮಾಲೀಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಟ್ರ್ಯಾಕ್ಟರ್‌ಗಳಲ್ಲಿ ಟಿಂಬರ್ ಸಾಗಿಸದಂತೆ ತಡೆಯಬೇಕು ಎಂದ ಒತ್ತಾಯಿಸಿದ್ದಾರೆ. ಇದರಿಂದ ಪೊಲೀಸ್ ಹಾಗೂ ಆರ್‌ಟಿಓ ಇಲಾಖೆ ಟ್ರ್ಯಾಕ್ಟರ್‌ಗಳನ್ನು ತಡೆದು ದಂಡ ವಿಧಿಸುತ್ತಿದ್ದಾರೆ. ಇದರಿಂದ ಟ್ರ್ಯಾಕ್ಟರ್‌ ಮಾಲೀಕರಿಗೆ ತೀವ್ರ ಹೊರೆಯಾಗುತ್ತಿದೆ ಎಂದರು.

ಈಗಾಗಲೇ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಅವರ ಬದುಕು ದುಸ್ತರವಾಗಿದೆ. ಕನಿಷ್ಟ ಟ್ರ್ಯಾಕ್ಟರ್ ಸಾಲದ ಕಂತುಗಳನ್ನು ಭರಿಸಲು ಟಿಂಬರ್ ಸಾಗಿಸುತ್ತಿದ್ದು. ಆದರೆ ಬಾಡಿಗೆಗಿಂತ ದಂಡವೇ ಹೆಚ್ಚಾಗಿ ಬಹಳಷ್ಟು ಸಮ ಸ್ಯೆಯಾಗಿದೆ. ಅಲ್ಲದೇ ಭಾರೀ ವಾಹನಗಳು ತೋಟದೊಳಗೆ ಓಡಾಡದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಬಳಕೆ ಅನಿ ವಾರ್ಯವಾಗಿದೆ ಎಂದು ಹೇಳಿದರು.

ಟ್ರ್ಯಾಕ್ಟರ್‌ಗಳಲ್ಲಿ ಟಿಂಬರ್ ಸಾಗಿಸಬಾರದೆಂದರೆ ತೋಟದ ಹಾಗೂ ಟಿಂಬರ್ ಮಾಲೀಕರಿಗೆ ತೊಂದರೆಯಾಗಲಿದೆ. ಆದ್ದರಿಂದ ಹಿಂದಿನಂತೆ ೨೦ ಕಿ.ಮೀ.ವರೆಗೆ ನಿಗಧಿತ ಭಾರದ ಟಿಂಬರ್ ಸಾಗಿಸಲು ಅಡ್ಡಿಪ ಡಿಸದಂತೆ ಆರ್‌ಟಿಓ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮಾಜಿ ಅಧ್ಯಕ್ಷ ಗುರುಶಾಂತಪ್ಪ, ಜಿಲ್ಲಾ ಉಪಾಧ್ಯಕ್ಷರಾ ದ ಕುಮಾ ರಸ್ವಾಮಿ, ದೇವರಾಜು, ಮುಖಂಡರುಗಳಾದ ರಾಜು, ಯುವರಾಜ್, ಮುರಳೀಧರ್, ಆನಂದ್ ಕುಮಾರ್, ಸೋಮಣ್ಣ, ಲಕ್ಕೇಗೌಡ, ಟ್ರ್ಯಾ ಕ್ಟರ್ ಮಾಲೀಕರು, ಕಾಫಿ ಬೆಳೆಗಾರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net