ಟ್ರ್ಯಾಕ್ಟರ್​ ಸಿಲುಕಿ ಬಾಲಕಿ ದುರ್ಮರಣ

Published on

ಬುಕ್ಕಾಪಟ್ಟಣ: ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿ ಗೋಪಾಲದೇವರಹಳ್ಳಿ ಗ್ರಾಪಂನ ಯರಮಾದನಹಳ್ಳಿಯಲ್ಲಿ ಟ್ರ್ಯಾಕ್ಟರ್​ ಹರಿದು ಬಾಲಕಿ ಸ್ಥಳದಲ್ಲಿ ಮೃತಪಟ್ಟಿದ್ದಾಳೆ. ಯರಮಾದನಹಳ್ಳಿಯ ಶ್ರೀರಂಗಪ್ಪ, ಭಾಗ್ಯಮ್ಮ ದಂಪತಿಯ ದ್ವೀತಿಯ ಪುತ್ರಿ ಪ್ರಕೃತಿ (5) ಮೃತೆ. ಶನಿವಾರ ಸಂಜೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮಳೆ ಬಂದ ಕಾರಣ ಬಾಲಕಿ ನಿಂತಿದ್ದ ಟ್ರ್ಯಾಕ್ಟರ್​ ಟ್ರಾಲಿ ಅಡಿ ಕುಳಿತುಕೊಂಡಿದ್ದಳು. ಇದನ್ನು ಗಮನಿಸದ ಚಾಲಕ, ಟ್ರ್ಯಾಕ್ಟರ್​ ಚಲಾಯಿಸಿದ ಪರಿಣಾಮ ಬಾಲಕಿಯ ತಲೆ ಮೇಲೆ ಟ್ರಾ$್ಯಲಿ ಟಯರ್​ ಹತ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳ್ಳಂಬೆಳ್ಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net