ಟ್ರ್ಯಾಕ್ಟರ್ ಬ್ಯಾಟರಿ ಕದಿಯುವ ಕಳ್ಳರು

23Dwd1-Web
ದೊಡವಾಡ ಗ್ರಾಮದಲ್ಲಿ ಟ್ರ್ಯಾಕ್ಟರ್‌ನ ಬ್ಯಾಟರಿ ಕಳವು ಮಾಡಿರುವುದು.
Published on

ದೊಡವಾಡ: ಗ್ರಾಮ ಹಾಗೂ ಸಮೀಪದ ಯಡಹಳ್ಳಿ, ಕೆಂಚರಾಮನ ಹಾಳ, ಸಂಗ್ರೇಶಕೊಪ್ಪ , ಕಲ್ಲೇ, ಕಬ್ಬೂರ, ಇನಾಂಹೊಂಗಲ ಗ್ರಾಮಗಳಲ್ಲಿ ಟ್ರ್ಯಾಕ್ಟರ್ ಬ್ಯಾಟರಿ ಕದಿಯುವ ಕಳ್ಳರ ಹಾವಳಿ ಹೆಚ್ಚಾಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ರೈತರು ತಮ್ಮ ಮನೆಗಳ ಮುಂದೆ ಟ್ರ್ಯಾಕ್ಟರ್ ನಿಲ್ಲಿಸುತ್ತಿದ್ದು, ತಡರಾತ್ರಿ ಕಳ್ಳರು ಆಗಮಿಸಿ ಟ್ರ್ಯಾಕ್ಟರ್ ಬ್ಯಾಟರಿ ಕದ್ದು ಪರಾರಿಯಾಗುತ್ತಿದ್ದಾರೆ. ಕಳೆದೊಂದು ವಾರದಲ್ಲಿ ಯಡಳ್ಳಿ, ಸಂಗ್ರೇಶಕೊಪ್ಪ, ಕಲ್ಲೇ ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳ ಬ್ಯಾಟರಿ ಕಳ್ಳತನ ಮಾಡಲಾಗಿದೆ. ಮಂಗಳವಾರ ರಾತ್ರಿ ದೊಡವಾಡ ಗ್ರಾಮದಲ್ಲಿ ಹಲವಾರು ರೈತರ ಟ್ರ್ಯಾಕ್ಟರ್ ಬ್ಯಾಟರಿ ಕಳವಾಗಿದೆ. ದೊಡವಾಡ ಪೊಲೀಸ್ ಠಾಣೆಯ ಪಿಎಸ್‌ಐ ಗಜಾನನ ನಾಯ್ಕ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನ ನಡೆದ ಸ್ಥಳದ ಹತ್ತಿರದಲ್ಲಿರುವ ಕೆವಿಜಿ ಬ್ಯಾಂಕ್‌ನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net