ಟ್ರ್ಯಾಕ್ಟರ್ ಡಿಕ್ಕಿಯಾಗಿ ಬೈಕ್​ ಸವಾರ ಸಾವು

Published on

ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿ ಕೈದಾಳ ಗೇಟ್​ ಬಳಿ ಬುಲೆಟ್​ ದ್ವಿಚಕ್ರ ವಾಹನಕ್ಕೆ ಟ್ರಾ$್ಯಕ್ಟರ್​ ಡಿಕ್ಕಿಯಾಗಿ ಬೈಕ್​ ಸವಾರ ಬುಧವಾರ ರಾತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೋಡಿಹಳ್ಳಿ ಕಾವಲಿನ ತೋಟದ ಮನೆಯ ವರುಣ್​(ಸ್ವಾಮಿ)(25) ಮೃತ. ಹಿಂಬದಿ ಸವಾರ ಪ್ರಜ್ವಲ್​ (25) ಗೆ ತೀವ್ರತರ ಪೆಟ್ಟಾಗಿದ್ದು, ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ನೊಣವಿನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸಪಾಳ್ಯದಲ್ಲಿ ಸರಣಿ ಅಪಘಾತ

ಬುಕ್ಕಾಪಟ್ಟಣ: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಹೊಸಪಾಳ್ಯದಲ್ಲಿ ಹಾದು ಹೋಗುವ ಬುಕ್ಕಾಪಟ್ಟಣ ಹಾಗಲವಾಡಿ ಮುಖ್ಯರಸ್ತೆಯಲ್ಲಿ ಕೆರೆಯ ಕೋಡಿಯ ಸಮೀಪದಲ್ಲಿ ಕಾರೊಂದು ಬೈಕ್​, ಆಟೋ ಕಾರಿಗೆ ಗುದ್ದಿದ್ದು, ಒರ್ವ ಮಹಿಳೆ, ಮಗು ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಸರಣಿ ಅಪಘಾತ ಮಾಡಿ ಕಾರಿನಲ್ಲಿ ತಪ್ಪಿಸಿಕೊಂಡು ಹೋಗುತ್ತಿದ್ದ ಚಾಲಕನನ್ನು ಬುಕ್ಕಾಪಟ್ಟಣದಲ್ಲಿ ಗ್ರಾಮಸ್ಥರು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರು ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಬುಕ್ಕಾಪಟ್ಟಣ ಉಪ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net