ಟ್ರ್ಯಾಕ್ಟರ್ ಟ್ರೈಲರ್ ಕಳ್ಳರ ಬಂಧನ

IMG-20231110-WA0010.jpg
Published on

ದಾವಣಗೆರೆ: ಟ್ರ್ಯಾಕ್ಟರ್ ಟ್ರೈಲರ್, ತೇಗದ ಮರ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಮಲೇಬೆನ್ನೂರು ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದು 14 ಲಕ್ಷ ರೂ. ಮೌಲ್ಯದ ಏಳು ಟ್ರೈಲರ್‌ಗಳು ಹಾಗೂ 35 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಕೊಮ್ಮನಹಾಳ್ ಗ್ರಾಮವಾಸಿ ಮನೋಜ್ ಹಾಗೂ ಮಧು ಬಂಧಿತ ಆರೋಪಿಗಳು. ಇತರೆ ಮೂವರು ಆರೋಪಿತರಿಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಮಲೇಬೆನ್ನೂರು, ಹರಿಹರ ಗ್ರಾಮಾಂತರ, ನ್ಯಾಮತಿ ಹಾಗೂ ಹೊನ್ನಾಳಿ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 7 ಟ್ರೈಲರ್‌ಗಳನ್ನು ಕಳವು ಮಾಡಲಾಗಿತ್ತು. ನ್ಯಾಮತಿ ಠಾಣೆ ವ್ಯಾಪ್ತಿಯಲ್ಲಿ ಒಂದು ತೇಗದ ಮರ ಕಳವು ಮಾಡಲಾಗಿತ್ತು.

ಹರಿಹರ ಸಿಪಿಐ ಸುರೇಶ ಸಗರಿ, ಮಲೇಬೆನ್ನೂರು ಠಾಣೆಯ ಪಿ.ಎಸ್.ಐ ಪ್ರಭು ಡಿ. ಕೆಳಗಿನಮನಿ ಹಾಗೂ ಅವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net