

ಕಲಬುರಗಿ: ಮಳ್ಳಿಯಿಂದ ಕಲಬುರಗಿ ಮಾರುಕಟ್ಟೆಗೆ ಉಳ್ಳಾಗಡ್ಡಿ ಸಾಗಿಸುತ್ತಿದ್ದ ಟ್ರಾÈಕ್ಟರ್‌ಗೆ ರಾತ್ರಿ ವೇಳೆ ಭೋಸಗಾ ರಸ್ತೆಯಲ್ಲಿ ಅಡ್ಡಗಟ್ಟಿ ಅದರಲ್ಲಿದ್ದ ಮಶಾಕ್‌ಸಾಬ್‌ಗೆ ಗಿಡದ ಟೊಂಗೆಯಿಂದ ಹೊಡೆದು ಸಾಯಿಸಲಾಗಿದೆ.
ಮಂಗಳವಾರ ರಾತ್ರಿ ಮಶಾಕ್‌ಸಾಬ್ ಮನೆಯಲ್ಲಿ ಪರಿಚಿತನಾದ ಪಾಂಡುರAಗ ಜತೆ ಊಟ ಮಾಡಿದ ಬಳಿಕ ಆತನ ಹೊಲದಲ್ಲಿದ್ದ ಉಳ್ಳಾಗಡ್ಡಿ ಚೀಲಗಳನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಕಲಬುರಗಿಗೆ ಬರುವಾಗ ಶಿವಕುಮಾರ, ಬಾಬುರಾವ ಮತ್ತು ಶ್ರೀಶೈಲ ಎಂಬುವರು ಅಡ್ಡಗಟ್ಟಿದರು. ಅಲ್ಲದೆ ಮಶಾಕ್‌ಸಾಬ್‌ನನ್ನು ಕೆಳಗಿಳಿಸಿ ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದ ಪಾಂಡುರAಗನಿಗೂ ನಡುವೆ ಬಂದರೆ ಹೊಡೆಯುತ್ತೇವೆ ಎಂದು ಬೆದರಿಸಿದ್ದಾರೆ ಎಂದು ಮೃತನ ಪತ್ನಿ ದೂರಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.