ಟ್ರಾೃಕ್ಟರ್ ಮೇಲಿಂದ ಬಿದ್ದು ಚಾಲಕ ಸಾವು

accident-15
Published on

ಹಾಸನ: ವೇಗವಾಗಿ ಟ್ರಾೃಕ್ಟರ್ ಚಾಲನೆ ಮಾಡಿಕೊಂಡು ಕೆರೆಯ ಏರಿ ಹತ್ತಿಸಲು ಹೋಗಿ ಆಯತಪ್ಪಿ ಕೆಳಗೆ ಬಿದ್ದ ಚಾಲಕ ಟ್ರಾೃಕ್ಟರ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬಾಲಕನೋರ್ವ ಗಾಯಗೊಂಡಿರುವ ಘಟನೆ ಹಾಸನ ತಾಲೂಕಿನ ದುದ್ದ ಹೋಬಳಿಯ ಚಿಕ್ಕಕಡಲೂರು ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಚಿಕ್ಕಕಡಲೂರು ಗ್ರಾಮದ ನಿವಾಸಿಯಾದ ಬೋರೇಗೌಡ (65) ಮೃತ ಚಾಲಕ.

ಭಾನುವಾರ ಬೋರೇಗೌಡ ಮೆಳಗೋಡು ಗ್ರಾಮದ ಹಿರಿಕೆರೆ ಹಿಂಭಾಗದಲ್ಲಿ ಇರುವ ತಮ್ಮ ಜಮೀನನ್ನು ಉಳುಮೆ ಮಾಡಿ ಸಂಜೆ ಮನೆಗೆ ವಾಪಸ್ ಬರುತ್ತಿದ್ದರು. ಈ ವೇಳೆ ತಮ್ಮ ಸಂಬಂಧಿ 10 ವರ್ಷದ ಬಾಲಕ ನಿರ್ಭಯ್‌ಗೌಡ ಮುತ್ತು ಕೂಡ ಜತೆಗಿದ್ದ. ಮೆಳಗೋಡು ಹಿರಿಕೆರೆಯ ಹಿಂಭಾಗದಿಂದ ಏರಿಯನ್ನು ಹತ್ತಿಸಲೆಂದು ವೇಗವಾಗಿ ಹೋದಾಗ ಟ್ರಾೃಕ್ಟರ್ ಆಯತಪ್ಪಿ ಏರಿಯ ಮೇಲಿಂದ ಮಗುಚಿ ಬಿದ್ದಿದೆ. ಈ ವೇಳೆ ಬೋರೇಗೌಡ ಟ್ರಾೃಕ್ಟರ್ ಅಡಿಯಲ್ಲಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಕ್ಕದಲ್ಲಿ ಕುಳಿತಿದ್ದ ನಿರ್ಭಯ್‌ಗೌಡ ಮುತ್ತು ಬಲತೊಡೆ ಹಾಗೂ ಮೈ ಕೈಗೆ ಪೆಟ್ಟಾಗಿದ್ದು, ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net