ಟ್ರಾೃಕ್ಟರ್ ಮಗುಚಿ ಬಿದ್ದು ಚಾಲಕ ಮೃತ

24BTP02 manjegowda (1)
ಮೃತ ಮಂಜೇಗೌಡ.
Published on

ಬೆಟ್ಟದಪುರ: ಸಮೀಪದ ಹಲಗನಹಳ್ಳಿ- ಕೌಲನಹಳ್ಳಿ ಮುಖ್ಯರಸ್ತೆಯಲ್ಲಿ ಬುಧವಾರ ತಡರಾತ್ರಿ ಟ್ರಾೃಕ್ಟರ್ ಮಗುಚಿ ಬಿದ್ದ ಪರಿಣಾಂ ಚಾಲಕ ಮೃತಪಟ್ಟಿದ್ದಾನೆ.

ಮೂಡಲಕುಪ್ಪಲು ಗ್ರಾಮದ ಮಂಜೇಗೌಡ(37) ಮೃತರು. ಟ್ರಾೃಕ್ಟರ್‌ನಲ್ಲಿ ನೀಲಗಿರಿ ಮರದ ತುಂಡುಗಳನ್ನು ತುಂಬಿಕೊಂಡು ಕೌಲನಹಳ್ಳಿ ಮಾರ್ಗವಾಗಿ ಚಿಕ್ಕಮಳಲಿ ಗ್ರಾಮಕ್ಕೆ ಹೋಗುತ್ತಿದ್ದಾಗ ಟ್ರಾೃಕ್ಟರ್ ಇಂಜಿನ್ ಹಾಗೂ ಟ್ರೈಲರ್ ನಡುವಿನ ಕೊಂಡಿ ಆಕಸ್ಮಿಕವಾಗಿ ಕಟ್ಟಾಗಿದೆ. ಈ ವೇಳೆ ಇಂಜಿನ್ ಮತ್ತು ಟ್ರೈಲರ್ ಮುಗುಚಿದ ಪರಿಣಾಮ ಚಾಲಕ ಮಂಜೇಗೌಡ ಕೆಳಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಮೃತನ ಭಾವ ಯೋಗೇಶ್ ಗುರುವಾರ ಬೆಟ್ಟದಪುರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ಸ್ಥಳ ಮಹಜರು ಮಾಡಿ ಮೃತದೇಹವನ್ನು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಬಳಿಕ ವಾರಸುದಾರರಿಗೆ ಒಪ್ಪಿಸಿದರು. ಮೃತನಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.

24ಬಿಟಿಪಿ02: ಮೃತ ವ್ಯಕ್ತಿ ಮಂಜೇಗೌಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net