ಟೌನ್​ಹಾಲ್​ನಲ್ಲಿ ಹೆಲಿಕ್ಯಾಪ್ಟರ್​ ಮಾಡೆಲ್​!

13
Published on

ವಿಶ್ವಭೂಪಟದಲ್ಲಿ ತುಮಕೂರು ಹೆಸರು ಮೂಡಿಸಿದ ಎಚ್​ಎಎಲ್​ ಕುರುಹು

ತುಮಕೂರು: ವಿಶ್ವಭೂಪಟದಲ್ಲಿ ಕಲ್ಪತರುನಾಡು ತುಮಕೂರು ಜಿಲ್ಲೆಯ ಹೆಸರು ಮೂಡಿಸಿದ ದೇಶದ ಅತಿದೊಡ್ಡ ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​ (ಎಚ್​ಎಎಲ್​)ಹೆಲಿಕ್ಯಾಪ್ಟರ್​ ಉತ್ಪಾದನಾ ಟಕದ ಕುರುಹಾಗಿ ನಗರದ ಹೃದಯಭಾಗ ಟೌನ್​ಹಾಲ್​ ವೃತ್ತದ ಬಳಿ "ಹೆಲಿಕ್ಯಾಪ್ಟರ್​ ಮಾಡೆಲ್​' ಪ್ರದರ್ಶನಕ್ಕೆ ವೇದಿಕೆ ಸಿದ್ಧ ಪಡಿಸಲಾಗಿದೆ. ಟೌನ್​ಹಾಲ್​ ವೃತ್ತದಲ್ಲಿ "ಹೆಲಿಕ್ಯಾಪ್ಟರ್​ ಮಾಡೆಲ್​' ಪ್ರದರ್ಶನಕ್ಕೆ ಮಹಾನಗರ ಪಾಲಿಕೆ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ. ಹೊರ ಜಿಲ್ಲೆ ಯಿಂದ ತುಮ ಕೂರಿಗೆ ಬರುವ ವರಿಗೆ ಈ ಹೆಲಿಕ್ಯಾಪ್ಟರ್​ ನೋಡುತ್ತಿದ್ದಂತೆ ಮನದಲ್ಲಿ ಗುಬ್ಬಿ ತಾಲೂಕು ಬಿದರೆಹಳ್ಳದ ಬಳಿ ಎಚ್​ಎಎಲ್​ ಹೆಲಿಕಾಪ್ಟರ್​ ಕಾರ್ಖಾನೆಯ ಚಿತ್ರಣ ಮೂಡಿಸಲಿದೆ.

ಒಂದೇ ಸೂರಿನಡಿ ರಿಪೇರಿ, ಸರ್ವೀಸ್​!: ಎಚ್​ಎಎಲ್​ ಟಕದಲ್ಲಿ ಭಾರತೀಯ ಭೂ ಹಾಗೂ ವಾಯುಸೇನೆ ಯುದ್ಧ ಬಳಕೆಗೆ ಲು ಹೆಲಿಕ್ಯಾಪ್ಟರ್​ ಉತ್ಪಾದನಾ ಮಾಡಲಾಗುತ್ತಿದೆ. 3 ಟನ್​ ತೂಕದ ಯುದ್ಧ ಬಳಕೆ ಲು ಹೆಲಿಕ್ಯಾಪ್ಟರ್​ ಟಕದಲ್ಲಿ ನಿರ್ಮಿಸಲಾಗುತ್ತಿದ್ದು, ಸ್ವದೇಶಿ ನಿರ್ಮಿತ ಕಡಿಮೆ ತೂಕದ ಹೆಲಿಕ್ಯಾಪ್ಟರ್​ ಅನ್ನು ಎಚ್​ಎಎಲ್​ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿರುವುದು ವಿಶೇಷ ಸಾಧನೆ ಎನಿಸಿದೆ. ಹೆಲಿಕ್ಯಾಪ್ಟರ್​ ನಿರ್ವಹಣೆ, ರಿಪೇರಿ ಹಾಗೂ ಸರ್ವೀಸ್​ (ಎಂಆರ್​ಒ) ಕೂಡ ಒಂದೇ ಸೂರಿನಡಿ (ಒನ್​ ಸ್ಟಾಪ್​ ಸಲ್ಯೂಷನ್​) ಮಾಡಬೇಕೆಂಬುದು ಎಚ್​ಎಎಲ್​ನದ್ದಾಗಿದೆ.

ಅಂಬೇಡ್ಕರ್​ ಕಂಚಿನ ಮೂರ್ತಿ: ಮಹಾನಗರ ಪಾಲಿಕೆ ಆವರಣದಲ್ಲಿನ ಪಾರಂಪರಿಕ ಕಟ್ಟಡ ಶ್ರೀ ಕೃಷ್ಣರಾಜೇಂದ್ರ ಪುರಭವನ ಮುಂಭಾಗದಲ್ಲಿ 12 ಅಡಿ ಎತ್ತರದ ಭಾರತರತ್ನ, ಸಂವಿಧಾನಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಕಂಚಿನ ಮೂರ್ತಿ ಲೋಕಾರ್ಪಣೆಯನ್ನು ಏ.14ರಂದೇ ಜಿಲ್ಲಾಡಳಿತ ನೆರವೇರಿಸಲಿದೆ. 12 ಅಡಿ ಎತ್ತರದ ಕಂಚಿನ ಮೂರ್ತಿ, ಆಧಾರ ಪೀಠ 8 ಅಡಿ ಒಟ್ಟು 20 ಅಡಿ ಎತ್ತರದ ಅಂಬೇಡ್ಕರ್​ ಮೂರ್ತಿಯನ್ನು ಅಂಬೇಡ್ಕರ್​ ಜಯಂತಿಯಂದೇ ಅನಾವರಣ ಮಾಡಲಾಗುತ್ತಿದೆ.

33 ಲಕ್ಷ ರೂ. ವೆಚ್ಚದಲ್ಲಿ ಪ್ಲ್ಲಾಟ್​ ಾಮ್​ರ್!: ಟೌನ್​ ಹಾಲ್​ ಮುಂಭಾಗ ಅಂಬೇಡ್ಕರ್​ ಕಂಚಿನ ಪುತ್ಥಳಿ ಅನಾವರಣಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದರ ಸಮೀಪವೇ 33 ಲಕ್ಷ ರೂ., ವೆಚ್ಚದಲ್ಲಿ "ಹೆಲಿಕಾಪ್ಟರ್​' ಪ್ರದರ್ಶಿಸಲು ವೇದಿಕೆ ನಿಮಾರ್ಣದ ಅಂತಿಮ ಕಾರ್ಯಗಳು ಭರದಿಂದ ಸಾಗಿದೆ. ಪ್ರದರ್ಶನಕ್ಕೆ ಇಡಲಾಗಿರುವ 50 ಲಕ್ಷ ರೂ. ಮೌಲ್ಯದ ಲೈಟ್​ ಯುಟಿಲಿಟಿ ಹೆಲಿಕಾಪ್ಟರ್​ (ಲು ಉಪಯೋಗಿ ಹೆಲಿಕ್ಯಾಪ್ಟರ್​) ಅನ್ನು 5 ಅಡಿ ಎತ್ತರ ಹಾಗೂ 50 ಅಡಿ ವ್ಯಾಸದ ಸುತ್ತುವ ವೇದಿಕೆ(ರೋಟೇಷನ್​ ಪ್ಲ್ಲಾಟ್​ ಾಮ್​ರ್) ಮೇಲೆ ಇಡಲಾಗಿದೆ. ಇದರ ಸುತ್ತಮುತ್ತಲಿನ ಅಂತಿಮ ಕೆಲಸಗಳು ನಡೆಯುತ್ತಿದ್ದು, ಏ.14ರಂದೇ ಹೆಲಿಕ್ಯಾಪ್ಟರ್​ ಮಾಡೆಲ್​ ಅನಾವರಣ ಆಗಲಿದೆ ಎಂದು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ "ವಿಜಯವಾಣಿ'ಗೆ ಮಾಹಿತಿ ಹಂಚಿಕೊಂಡರು.

ಎಚ್​ಎಲ್​ ಹೆಲಿಕ್ಯಾಪ್ಟರ್​ ಟಕ: ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​ (ಎಚ್​ಎಎಲ್​) ಹೆಲಿಕ್ಯಾಪ್ಟರ್​ ಉತ್ಪಾದನಾ ಟಕ

ವಿಸ್ತೀರ್ಣ: 610 ಎಕರೆ, ಯೋಜನಾ ವೆಚ್ಚ: 6400 ಕೋಟಿ ರೂ., ಮಂಜೂರಾತಿ: 2009&10ರ ಯಪಿಎ ಸರ್ಕಾರದ ಅವಧಿ, ಶಂಕುಸ್ಥಾಪನೆ: ಜ.3, 2016 ಪ್ರಧಾನಿ ನರೇಂದ್ರ ಮೋದಿ, ಲೋಕಾರ್ಪಣೆ: ಫೆ.6, 2023 ಪ್ರಧಾನಿ ನರೇಂದ್ರ ಮೋದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net