

ಚಿತ್ರದುರ್ಗ: ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ನೂತನ ಅಧ್ಯಕ್ಷರಾಗಿ ಎಂ. ನಿಶಾನಿ ಜಯಣ್ಣ, ಉಪಾಧ್ಯಕ್ಷರಾಗಿ ಎನ್.ಎಂ. ಪುಷ್ಟ ವಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್. ಮೊಹಮ್ಮದ್ ಯೂನುಸ್ ಪರ್ವೀಜ್ ತಿಳಿಸಿದ್ದಾರೆ.
ಕಳೆದ ಜನವರಿ 27ರಂದು ಚುನಾವಣೆಯಲ್ಲಿ ಸೊಸೈಟಿ 12 ಜನ ನಿರ್ದೇಶಕ ಸ್ಥಾನಗಳಿಗೆ ನಿಶಾನಿ ಜಯಣ್ಣ ಅವರ ನೇತೃತ್ವದ ತಂಡ ಅವಿರೋಧವಾಗಿ ಆಯ್ಕೆಯಾಗಿತ್ತು.
ನಿಶಾನಿ ಜಯಣ್ಣ, ಲಿಯಾಕತ್ ಅಲಿಖಾನ್, ಸಾಧೀಕ್‌ಬಾಷಾ, ಜಿ. ಸುರೇಶ್‌ಕುಮಾರ್(ಭಾಫ್ನಾ), ಜೆ.ಆರ್.ಹರೀಶ್, ಜೆ.ನಿಶಾನಿ ದಶರಥ್ ಚಂದ್ರಪ್ಪ, ಒ. ತಿಪ್ಪೇಸ್ವಾಮಿ, ಶ್ರೀನಿವಾಸ್‌ಮೂರ್ತಿ, ಸೂರ್ಯಪ್ರಕಾಶ್, ಎನ್.ಎಂ. ಪುಷ್ಪವಲ್ಲಿ, ಎ. ಚಂಪಕಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕಟವಾಗುತ್ತಿದ್ದಂತೆ ಸಿಹಿ ವಿತರಿಸಿ,ಪಟಾಕಿ ಸಿಡಿಸಿ ಬೆಂಬಲಿಗರು ಸಂಭ್ರಮಿಸಿದರು.
ಯಾವುದೇ ತಾರತಮ್ಯವಿಲ್ಲದೆ ಎಲ್ಲ ಜಾತಿ, ವರ್ಗದವರಿಗೂ ಸೊಸೈಟಿ ಆಡಳಿತ ಮಂಡಳಿಯಲ್ಲಿ ಅವಕಾಶ ಲಭ್ಯವಾಗಿದೆ ಎಂದು ನಿಶಾ ನಿ ಜಯಣ್ಣ ಹೇಳಿದರು.
ಆಯ್ಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 1912ರಲ್ಲಿ ಸ್ಥಾಪಿತವಾದ ಸೊಸೈಟಿಯಲ್ಲಿ ಗಣ್ಯಾತೀಗಣ್ಯರು ಆಡಳಿತ ನಡೆಸಿದ್ದಾರೆ. 2005ರಲ್ಲಿ ಒಂದೂವರೆ ಕೋಟಿ ರೂ. ನಷ್ಟದಲ್ಲಿದ್ದ ಸೊಸೈಟಿಯನ್ನು ಈಗ ಆರ್ಥಿಕವಾಗಿ ಸುಸ್ಥಿತಿಗೆ ತರಲಾಗಿದೆ. 2 ಕೋಟಿ ರೂ.ವೆಚ್ಚದಲ್ಲಿ ಸಹಕಾರಿ ಸಮುದಾಯ ಭವನ ನಿರ್ಮಿಸುವ ಗುರಿಯಿದೆ ಎಂದರು.