

ಚಿತ್ರದುರ್ಗ: ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ 2023-24 ನೇ ಹಣಕಾಸು ಸಾಲಿನಲ್ಲಿ 14.38 ಲಕ್ಷ ರೂ ನಿವ್ವಳ ಲಾಭಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ನಿಶಾನಿ ಜಯಣ್ಣ ಹೇಳಿದರು.
ನಗರದ ಶ್ರೀಮತಿ ಕಾಟಮ್ಮ ಪಟೇಲ್ ವೀರನಾಗಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸೊಸೈಟಿ 107ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಷೇರುದಾರರಿಗೆ ಶೇ.16 ಡಿವಿಡೆಂಡ್ ನೀಡಲಾಗುವುದು, ಸೊಸೈಟಿ ಮೇಲಿರುವ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು ಎಂದರು.
ಬಂಗಾರ ಅಡಮಾನ ಸಾಲ, ಲಾಕರ್ ವ್ಯವಸ್ಥೆಯೊಂದಿಗೆ, ಡಿವಿಡೆಂಡ್‌ನಲ್ಲಿ 60 ರೂ. ವಿಮೆ ಕಂತು ಪಾವತಿಸುತ್ತೇವೆ. ಎಸ್‌ಎಂಎಸ್ ಮೂಲಕ ಖಾತೆ ವಹಿವಾಟು ವಿವರ ತಿಳಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ಸೆಕೆಂಡ್ ಪಿಯುಸಿ ಪರೀಕ್ಷೆಗಳಲ್ಲಿ ಶೇ.85 ಕ್ಕಿಂತ ಅಧಿಕ ಅಂಕಗಳೊಂದಿಗೆ ಉತ್ತೀರ್ಣರಾದ ಸದಸ್ಯರ ಮಕ್ಕಳನ್ನು ಹಾಗೂ ಹಿರಿಯ ಸದಸ್ಯರನ್ನು ಗೌರವಿಸಲಾಯಿತು.
ಸೊಸೈಟಿ ಉಪಾಧ್ಯಕ್ಷ ಸಿ.ಎಚ್.ಸೂರ್ಯಪ್ರಕಾಶ್, ನಿರ್ದೇಶಕರಾದ ಡಾ.ರಹಮತ್‌ಉಲ್ಲಾ, ಬಿ.ವಿ.ಶ್ರೀನಿವಾಸ್‌ಮೂರ್ತಿ, ಬಿ.ಎಂ.ನಾಗರಾಜ್ ಬೇದ್ರೆ, ಕೆ.ಚಿಕ್ಕಣ್ಣ, ಸೈಯದ್‌ಮುಜೀಬ್, ಎಸ್.ವಿ.ಪ್ರಸನ್ನ, ಕೆ.ಪ್ರಕಾಶ್, ಚಂದ್ರಪ್ಪ, ಎ.ಚಂಪಕಾ, ಎನ್.ಎಂ.ಪುಷ್ಪವಲ್ಲಿ ಹಾಜರಿದ್ದರು. ಮಹ್ಮದ್ ನಯೀಮ್ ನಿರೂಪಿಸಿದರು.