

ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವದ ೭೦ನೇ ಸಂಭ್ರಮಾಚರಣೆ ಅಂಗವಾಗಿ ಶನಿವಾರ ನಗರದ ಎಂ.ಜಿ.ರಸ್ತೆಯ ಚಿಕ್ಕಮಗಳೂರು ಟೌನ್ ಕೋ-ಆಪರೇಟಿವ್ ಸೊಸೈಟಿ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಮಾತನಾಡಿದ ವೇಣುಗೋಪಾಲ್, ನಮ್ಮ ಭಾಷೆ ಕನ್ನಡವನ್ನು ಸ್ಮರಿಸುತ್ತಾ, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವುಗಳು ಸಾಗಬೇಕು. ನಮ್ಮ ನೆಲ, ಜಲ ಹಾಗೂ ಭಾಷೆಯನ್ನು ಕಾಪಾಡುವ ಜೊತೆಗೆ ಬೆಳವಣಿಗೆಯತ್ತ ಕೊಂಡೊಯ್ಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷೆ ಹಾಲಮ್ಮ ರಾಮಚಂದ್ರ, ನಿರ್ದೇಶಕರಾದ ಸಿ.ಆರ್.ಕೇಶ ವಮೂರ್ತಿ, ಈಶ್ವರಪ್ಪ, ಸಿ.ವಿ.ಕುಮಾರ್, ಸಿ.ಆರ್.ಗಂಗಾಧರ್, ಕೆ.ಪಿ.ಪರಮೇಶ್ವರ್, ಸಿ.ಡಿ.ರಘು, ಅಂಬಿಕಾ ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು.