ಟೌನ್ ಕೋ-ಆಪರೇಟಿವ್ ಸೊಸೈಟಿಗೆ ರೂ. 6.40 ಲಕ್ಷ ಲಾಭ

kdr copor
ಕಡೂರು ಟೌನ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆಯಲ್ಲಿ ಹಿರಿಯ ಸದಸ್ಯರಾದ ಕೆ.ವಿ.ವಾಸು, ನಾಗಣ್ಣ, ಸುರೇಶ್, ಅವರನ್ನು ಸನ್ಮಾನಿಸಲಾಯಿತು. ಕೆ.ಬಿ.ಸೋಮೇಶ್, ಕಲ್ಪನಾ, ಕೆ.ಜಿ.ರವಿ, ಕೆ.ಜಿ.ಶ್ರೀನಿವಾಸಮೂರ್ತಿ, ಕೆ.ಜಿ.ಲೋಕೇಶ್ವರ್ ಮತ್ತಿತರರಿದ್ದರು.
Published on

ಕಡೂರು: ಟೌನ್ ಕೋ-ಆಪರೇಟಿವ್ ಸೊಸೈಟಿ 2024-25ನೇ ಸಾಲಿನಲ್ಲಿ 6.40 ಲಕ್ಷ ರೂಪಾಯಿ ಲಾಭ ಗಳಿಸಿ ಷೇರುದಾರರಿಗೆ ಶೇ.10ರಷ್ಟು ಡಿವಿಡೆಂಡ್ ನೀಡುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ಕೆ.ಬಿ.ಸೋಮೇಶ್ ತಿಳಿಸಿದರು.

ಭಾನುವಾರ ಆಯೋಜಿಸಿದ್ದ 116ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸೊಸೈಟಿಯನ್ನು ಹಂತಹಂತವಾಗಿ ಎಲ್ಲ ರೀತಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಕಚೇರಿಯನ್ನು ಆಧುನಿಕವಾಗಿ ಅಭಿವೃದ್ಧಿ ಪಡಿಸಲಾಗಿದೆ. ಸಿಬ್ಬಂದಿ ಕೊಠಡಿ, ಆಡಳಿತ ಮಂಡಳಿ ಸಭೆಗೆ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಇದಕ್ಕೆ ಸದಸ್ಯರು ಹಾಗೂ ನಿರ್ದೇಶಕರ ಸಲಹೆ, ಸೂಚನೆ ಮತ್ತು ಸಿಬ್ಬಂದಿ ಕರ್ತವ್ಯ ನಿಷ್ಠೆಯೇ ಕಾರಣ ಎಂದರು.

ಸಂಘ ಲಾಭಗಳಿಸಲು ಅನೇಕ ಅಡೆತಡೆೆಗಳಿದ್ದರೂ ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ವರ್ಗದ ಪರಿಶ್ರಮದಿಂದ ಲಾಭದತ್ತ ಸಾಗುತ್ತಿದೆ. ಸಹಕಾರದ ಮೂಲಕ ಷೇರುದಾರರ ಆಸ್ತಿಯನ್ನು ಉಳಿಸಿಕೊಳ್ಳಲಾಗಿದೆ ಎಂದರು.

ಸೊಸೈಟಿ ಪ್ರಗತಿಗೆ ಹಿರಿಯ ಷೇರುದಾರರು ಸಲಹೆ ನೀಡಿದರು. ಷೇರುದಾರರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.

ಸೊಸೈಟಿ ಉಪಾಧ್ಯಕ್ಷೆ ಕಲ್ಪನಾ, ನಿರ್ದೇಶಕರಾದ ಕೆ.ಜಿ.ಶ್ರೀನಿವಾಸಮೂರ್ತಿ, ಕೆ.ಎಚ್.ರವಿ, ವಿ.ಎಂ.ಪ್ರಸಾದ್, ಕೆ.ಕೆ.ಮಂಜು, ಆರ್.ಚಂದ್ರಶೇಖರ್, ಕೆ.ಜಿ.ಲೋಕೇಶ್ವರ್, ಕೆ.ಜಿ.ಪ್ರದೀಪ್, ಫೈರೋಜ್ ಖಾನ್, ಟಿ.ಆರ್.ರೇಣುಕಪ್ಪ, ಇಂದ್ರಾ ಹೇಮರಾಜ್, ಎಂ.ಉಪೇಂದ್ರನಾಥ್, ಬಿ.ಎಲ್.ಕುಮಾರ್, ಎನ್.ವೆಂಕಟೇಶ್, ಕೆ.ಎಂ.ನಾಗರಾಜ್, ಚನ್ನಕೇಶವಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net