

ಧಾರವಾಡ: ನಗರದ ಎಸ್‌ಡಿಎಂಸಿಇಟಿಯ ಟೋಸ್ಟ್‌ಮಾಸ್ಟರ್ಸ್ ಕ್ಲಬ್‌ನ ಪದಾಧಿಕಾರಿಗಳ ಪದಗ್ರಹಣ ಇತ್ತೀಚೆಗೆ ನಡೆಯಿತು.
ಪ್ರೊ. ವಾಸುದೇವ ಪಾರ್ವತಿ ಅಧ್ಯಕ್ಷ, ಚೇತನಾ ಕೆ., ರೇವತಿ ಸಿ. ಮತ್ತು ಶ್ರೇಯಸ್ ವಿ. ಉಪಾಧ್ಯಕ್ಷರಾಗಿ, ಸೊಹೈಲ್ ಕೆ. ಕಾರ್ಯದರ್ಶಿ, ವಂದಿತಾ ಖಜಾಂಚಿ, ಪ್ರಥಮೇಶ ಸಜೆರ್ಂಟ್ ಅಟ್ ಆರ್ಮ್ಸ್ ಆಗಿ ಅಧಿಕಾರ ವಹಿಸಿಕೊಂಡರು.
ಬೆಳಗಾವಿಯ ಹಿರಿಯ ಟೋಸ್ಟ್‌ಮಾಸ್ಟರ್ ಹಾಗೂ ಖ್ಯಾತ ಮೂತ್ರಶಾಸ್ತ್ರಜ್ಞ ಡಾ. ಕಮಲಾಕರ ಅಚ್ರೇಕರ ಅತಿಥಿಯಾಗಿ ಪಾಲ್ಗೊಂಡಿದ್ದರು. ಎಸ್‌ಡಿಎಂಸಿಇಟಿಯ ಪ್ರಾಚಾರ್ಯ ಡಾ. ಕೆ. ಗೋಪಿನಾಥ, ಉತ್ತರ ಕರ್ನಾಟಕದ ಟೋಸ್ಟ್‌ಮಾಸ್ಟರ್ಸ್ ಇಂಟರ್‌ನ್ಯಾಷನಲ್‌ನ ಏರಿಯಾ ನಿರ್ದೇಶಕಿ ಚಿತ್ರಾ ವೀರೇಶ, ಇತರರಿದ್ದರು. ವಂದಿತಾ ಮತ್ತು ಸಾಕ್ಷಿ ನಿರ್ವಹಿಸಿದರು. ವಿದ್ಯಾರ್ಥಿಗಳು ಗಣ್ಯರಿದ್ದರು.