

ಬೆಂಗಳೂರು ಗ್ರಾಮಾಂತರ: ದೇಶಾದ್ಯಂತ ಮಧ್ಯರಾತ್ರಿಯಿಂದಲೇ ಜಾರಿಯಾದ ಾಸ್ಟಾೃಗ್ ಕಡ್ಡಾಯದ ಪರಿಣಾಮ ದೇವನಹಳ್ಳಿ, ಹೊಸಕೋಟೆ ಹಾಗೂ ನೆಲಮಂಗಲ ಟೋಲ್‌ಗಳಲ್ಲಿ ವಾಹನ ಸವಾರರು ಪರದಾಡಿದರು.
ಟೋಲ್ ಸಿಬ್ಬಂದಿಯೊಂದಿಗೆ ಜಟಾಪಟಿ, ವಾಗ್ವಾದಗಳು ನಡೆದವು, ಕೆಲವು ವಾಹನ ಸವಾರರು ಆಕ್ರೋಶಗೊಂಡು ಸಿಬ್ಬಂದಿ ವಿರುದ್ಧ ಹರಿಹಾಯ್ದ ದೃಶ್ಯಗಳು ಸಾಮಾನ್ಯವಾಗಿತ್ತು. ವಾಹನ ಸವಾರರು ಹಾಗೂ ಟೋಲ್ ಸಿಬ್ಬಂದಿ ನಡುವಿನ ಕದನದಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳು ಕಿ.ಮೀ.ಗಟ್ಟಲೆ ಸಾಲುಗಟ್ಟಿ ನಿಲ್ಲುವಂತಾಯಿತು. ಇದರ ನಡುವೆ ಕೆಲವು ವಾಹನ ಸವಾರರು ಟೋಲ್‌ಗಳ ಬಳಿಯಿಂದ ವಾಹನಗಳನ್ನು ಹಿಂದಕ್ಕೆ ತಿರುಗಿಸಿಕೊಂಡು ಗ್ರಾಮಗಳ ಮೂಲಕ ಸಾಗಲು ಪ್ರಯತ್ನಿಸಿದ ದೃಶ್ಯ ಕಂಡುಬಂತು.
ಚಿಲ್ಲರೆ ಜಟಾಪಟಿ: ಾಸ್ಟಾೃಗ್ ಅಳವಡಿಸಿಕೊಳ್ಳದ ವಾಹನ ಸವಾರರಿಂದ ದುಪ್ಪಟ್ಟು ಹಣ ಪಡೆದು ವಾಹನ ಬಿಡುತ್ತಿದ್ದ ಸಿಬ್ಬಂದಿಗೆ ಹಣಕ್ಕೆ ವಾಪಸ್ ಚಿಲ್ಲರೆ ಕೊಡುವುದು ದುಸ್ಸಾಹಸದ ಕೆಲಸವಾಯಿತು. ಇದೇ ವಿಷಯವಾಗಿ ವಾಹನ ಸವಾರರು ಹಳೇ ದರಕ್ಕೆ ಟಿಕೆಟ್ ನೀಡುವಂತೆ ಪಟ್ಟುಹಿಡಿದು ವಾಗ್ವಾದ ನಡೆಸಿದರು. ವಾಹನ ಸವಾರರನ್ನು ಸಂಬಾಳಿಸುವಲ್ಲಿ ಟೋಲ್ ಸಿಬ್ಬಂದಿ ಹೈರಾಣಾದರು.
ಕುಮಾರ್‌ಬಂಗಾರಪ್ಪ ಪುತ್ರನಿಂದ ಹಣ ಪಾವತಿ: ದೇವನಹಳ್ಳಿ ಟೋಲ್ ಪ್ಲಾಜಾದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಪುತ್ರ ಾಸ್ಟಾೃಗ್ ಇಲ್ಲದೆ ಹಣ ಪಾವತಿಸದೆ ಮುಂದೆ ಹೋಗಲು ಯತ್ನಿಸಿದರಾದರೂ ಮಾಧ್ಯಮದವರನ್ನು ಕಂಡು ಹಣ ಪಾಪತಿಸಿದರು ಎನ್ನಲಾಗಿದೆ.
ವಾಟಾಳ್ ಪ್ರತ್ಯಕ್ಷ: ದೇವನಹಳ್ಳಿ ಟೋಲ್ ಪ್ಲಾಜಾ ಬಳಿ ಬೆಂಬಲಿಗರೊಂದಿಗೆ ಪ್ರತ್ಯಕ್ಷವಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಟೋಲ್ ಬೂತ್‌ಗೆ ಕಾರುಗಳನ್ನು ಅಡ್ಡಲಾಗಿ ನಿಲ್ಲಿಸಿ ಕೇಂದ್ರ ಸರ್ಕಾರದ ವಿರುದ್ಧ ೋಷಣೆ ಕೂಗಿದರು. ತಕ್ಷಣವೇ ಎಚ್ಚೆತ್ತ ಪೊಲೀಸರು ಅವರನ್ನು ವಶಕ್ಕೆ ಪಡೆದು ಕರೆದೊಯ್ದರು.
ಎಲ್ಲ ಟೋಲ್‌ಗಳಿಗಿಂತಲೂ ದುಬಾರಿಯಾಗಿರುವ ಈ ಟೋಲ್‌ನಲ್ಲಿ ಾಸ್ಟಾೃಗ್ ಕಡ್ಡಾಯದ ನೆಪದಲ್ಲಿ ಜನಸಾಮಾನ್ಯರಿಂದ ಹಗಲು ದರೋಡೆ ಮಾಡಲಾಗುತ್ತಿದೆ, ಈಗಾಗಲೇ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಪರಿಣಾಮ ಅಗತ್ಯ ವಸ್ತುಗಳು ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ, ಸುಟ್ಟ ಗಾಯದ ಮೇಲೆ ಬರೆ ಎಳೆದಂತೆ ಾಸ್ಟಾೃಗ್ ನೆಪದಲ್ಲಿ ಜನರನ್ನು ಲೂಟಿ ಮಾಡುತ್ತಿರುವ ಕೇಂದ್ರ ಸರ್ಕಾರ ಾಸ್ಟಾೃಗ್ ಕಡ್ಡಾಯದ ಆದೇಶ ಹಿಂಪಡೆಯದಿದ್ದರೆ ಎಲ್ಲ ಟೋಲ್‌ಗಳನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಾಟಾಳ್ ಎಚ್ಚರಿಕೆ ನೀಡಿದರು.