ಟೊಮ್ಯಾಟೊ ಬೆಳೆ ನಾಶಕ್ಕೆ ಮುಂದಾದ ರೈತ

22 Budikote 1 tomoto
Published on

ಬೂದಿಕೋಟೆ: ಕರೊನಾ ಲಾಕ್‌ಡೌನ್‌ನಿಂದ ಟೊವ್ಯಾಟೊಗೆ ವಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ಸೂಕ್ತ ಬೆಲೆ ಇಲ್ಲದೆ ಕಂಗೆಟ್ಟಿರುವ ರೈತರು, ಬೆಳೆ ಸಮೇತ ತೋಟವನ್ನು ನಾಶಪಡಿಸಲು ಮುಂದಾಗಿದ್ದಾರೆ.

ಕೋಲಾರ ಜಿಲ್ಲೆಯ ಹೆೆಚ್ಚಿನ ರೈತರು ವ್ಯವಸಾಯವನ್ನೇ ಅವಲಂಬಿಸಿದ್ದು, ಅಧಿಕ ಪ್ರವಾಣದಲ್ಲಿ ಟೊವ್ಯಾಟೊ ಬೆಳೆಯುತ್ತಾರೆ. ಜಿಲ್ಲೆಯ ಟೊವ್ಯಾಟೊಗೆ ರಾಜ್ಯ ಸೇರಿ ಇತರ ರಾಜ್ಯಗಳಲ್ಲೂ ಬೇಡಿಕೆ ಇರುವ ಕಾರಣ ಲಕ್ಷಾಂತರ ರೂ. ಖರ್ಚು ವಾಡಿ ಬೆಳೆ ಬೆಳೆಯುತ್ತಾರೆ. ಆದರೆ ಕಳೆದೆರಡು ವರ್ಷಗಳಿಂದ ಕರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಸಮರ್ಪಕ ಬೆಲೆ ಇಲ್ಲದೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೂದಿಕೋಟೆ ಹೋಬಳಿಯ ರೈತರು ಕರೊನಾ ಸಮಯದಲ್ಲೂ ಅಲ್ಪಸ್ವಲ್ಪ ನೀರು ಬಳಸಿಕೊಂಡು ಅಧಿಕ ಬೆಲೆಗೆ ಕ್ರಿಮಿನಾಶಕ, ಗೊಬ್ಬರ ಖರೀದಿ ವಾಡಿ ಟೊವ್ಯಾಟೊ ಬೆಳೆದಿದ್ದಾರೆ. ಇಳುವರಿಯೂ ಚೆನ್ನಾಗಿ ಬಂದಿದ್ದು, ಹಾಕಿದ ಬಂಡವಾಳದೊಂದಿಗೆ ಮೂರು ಕಾಸು ಲಾಭ ಬರಬಹುದು ಎಂದು ಕನಸು ಕಂಡಿದ್ದ ರೈತರಿಗೆ ಲಾಕ್‌ಡೌನ್ ನಿರಾಸೆ ಮೂಡಿಸಿದೆ.

ಬೂದಿಕೋಟೆ ಹೋಬಳಿ ದಿನ್ನಕೊತ್ತೂರು ಗ್ರಾಮದ ರೈತ ಎಂ.ಎಸ್.ರೆಡ್ಡಿ ಕೈ ಸಾಲ ಪಡೆದು ಟೊವ್ಯಾಟೊ ಬೆಳೆದಿದ್ದರು. ಲಾಕ್‌ಡೌನ್‌ನಿಂದ ವಾರುಕಟ್ಟೆಗಳಲ್ಲಿ ಟೊವ್ಯಾಟೊಗೆ ಉತ್ತಮ ಬೆಲೆ ಇಲ್ಲದೆ ವಾರಾಟವಾಗಲಿಲ್ಲ. ಮುಂದಿನ ದಿನಗಳಲ್ಲಿ ಅಧಿಕ ಬೆಲೆ ಸಿಗಬಹುದು ಎಂಬ ನಂಬಿಕೆಯಲ್ಲಿ ಹಲವು ಬಾರಿ ಟೊವ್ಯಾಟೊ ಬಿಡಿಸಿ ತೋಟದ ಪಕ್ಕದಲ್ಲೇ ಸುರಿದಿದ್ದರು. ಸರ್ಕಾರ ಜೂ.7ರವರೆಗೆ ಲಾಕ್‌ಡೌನ್ ವಿಸ್ತರಣೆ ವಾಡಿದ್ದರಿಂದ ಕಂಗಾಲಾಗಿ ಬೆಳೆ ನಾಶಪಡಿಸಿದ್ದಾರೆ.

ಮೂರು ಎಕರೆಯಲ್ಲಿ ಟೊವ್ಯಾಟೊ ಬೆಳೆಯಲಾಗಿದ್ದು, ಬೆಳೆಗೆ ಬೆಲೆ ಇಲ್ಲದೆ ಹಾಕಿದ ಬಂಡವಾಳ ವಾಪಸ್ ಪಡೆಯದೆ ಲಕ್ಷಾಂತರ ರೂ.ನಷ್ಟ ಉಂಟಾಗಿದೆ. ಸರ್ಕಾರ ರೈತರ ನೆರವಿಗೆ ಮುಂದಾಗಬೇಕು. ಎಂ.ಎಸ್ ರೆಡ್ಡಿ, ರೈತ ದಿನ್ನಕೊತ್ತೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net