ಟೈಲರ್ ಮೇಲೆ ಮಾರಣಾಂತಿಕ ಹಲ್ಲೆ

1640258149242
Published on

ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಚಡಚಣ ಪಟ್ಟಣದಲ್ಲಿನ ಟೈಲರಿಂಗ್ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಸ್ಥಳೀಯ ನಿವಾಸಿ ಮಹೆಬೂಬ್ ನದಾಫ್ ಹಾಗೂ ಆತನ ಐವರು ಸಂಭಂದಿಕರು ಕಟ್ಟಿಗೆ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಬಸವರಾಜ ಕೊನೇರಿ ಎಂಬ ಟೈಲರ್ ಮುಖಕ್ಕೆ ಗಂಭೀರ ಗಾಯವಾಗಿದೆ. ಮೈ, ಕೈಗಳಿಗೆ ಹೊಡೆದು ಗಾಗೊಳಿಸಿದ್ದಾರೆ. ಹಲ್ಲೆಗೊಳಗಾದ ಬಸವರಾಜ ಕೊನೇರಿ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹೆಬೂಬ್ ನದಾಫ್ ಹಾಗೂ ಅವರ ಸಂಭಂದಿಕರು ಸೇರಿ ಬಸವರಾಜ ಮೇಲೆ ಹಲ್ಲೆ ನಡೆಸುತ್ತಿರುವಾಗ ಜಗಳ ಬಿಡಿಸಲು ಬಂದಿದ್ದ, ಬಸವರಾಜ ಅವರ ಅಂಗಡಿಯಲ್ಲಿ ಕೆಲಸ ಮಾಡುವ ಕೆಲಸಗಾರರಾದ ಅಶಪಾಕ್ ಮತ್ತು ಶಬ್ಬೀರ್ ಎಂಬುವವರ ಮೇಲೂ ಹಲ್ಲೆ ಮಾಡಲಾಗಿದೆ. ಈ ಕುರಿತು ಚಡಚಣ ಠಾಣೆ ಪೊಲೀಸರು ಕ್ರಮ ಕೈಗೊಂಡು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net