

ಹಾಸನ: ಟೈಮ್ಸ್ ಶಾಲೆಯಲ್ಲಿ ಪೋಷಕರಿಗಾಗಿ ಹಮ್ಮಿಕೊಂಡಿದ್ದ ಚಿತ್ರ ಕಲಾ ಸ್ಪರ್ಧೇಯಲ್ಲಿ ಬಿನ್ನ ಬಿನ್ನವಾದ ಚಿತ್ರಗಳನ್ನು ರಚಿಸುವ ಮೂಲಕ ತಮ್ಮ ಮಕ್ಕಳಿಗಿಂತ ನಾವೇನು ಕಮ್ಮಿಯಿಲ್ಲ ಎಂದು ಸಾಬೀತುಪಡಿಸಿದರು.
ನಗರದ ವಿಜಯನಗ ಬಡಾವಣೆಯಲ್ಲಿರುವ ಟೈಮ್ಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಟೈಮ್ಸ್ ಚಿತ್ತಾರ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೋಷಕರಿಗೆ ತಮ್ಮಲ್ಲಿರುವ ಕಲೆಯನ್ನು ಹೊರ ಹಾಕಿದರು. ಕಾರ್ಯಕ್ರಮದಲ್ಲಿ ಸುಮಾರು 400 ಪೋಷಕರು ಭಾಗವಹಿಸಿ ವೃತ್ತಿಯಲ್ಲಿ ಚಿತ್ರಕಲಾ ಕಾರರಾಗದಿದ್ದರೂ ತಮ್ಮ ಒತ್ತಡದ ಬದುಕಿನಲ್ಲಿ ಕೊಂಚ ಸಮಯವನ್ನು ಸಂತಸದಿಂದ ತಮ್ಮ ಬಾಲ್ಯದ ದಿನಗಳನ್ನು ನೆನಪಿಸುವಂತಹ ಚಿತ್ರಗಳನ್ನು ಬಿಡಿಸುವ ಮೂಲಕ ಒಂದು ಗಂಟೆಗಳ ಕಾಲ ತಮ್ಮಲ್ಲಿ ಹುದುಗಿದ್ದ ಮುಗ್ಧ ಚಿತ್ರಕಲೆಯನ್ನು ಹೊರತರುವಂತಹ ಪ್ರಯತ್ನ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದಂತಹ ಎಲ್ಲಾ ಪೋಷಕ ಸ್ಪರ್ಧಿಗಳಿಗೂ ಕೂಡ ನೆನಪಿನ ಕಾಣಿಕೆಗಳನ್ನು ನೀಡಿ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿ.ಕೆ. ಗಂಗಾಧರ್ ಮಾತನಾಡಿ, ಮನುಷ್ಯ ಹುಟ್ಟಿನಿಂದ ಕಲರಸಿಕನಾಗಿದ್ದಾನೆ. ಅವನಲ್ಲಿ ಒಂದಿಲ್ಲೊಂದು ಅಭಿರುಚಿ ಹುದುಗಿರುತ್ತದೆ. ಕೆಲವೊಮ್ಮೆ ಅದಕ್ಕೆ ಸೂಕ್ತ ವೇದಿಕೆ ಇಲ್ಲದೆ, ಅಥವಾ ಅಭ್ಯಾಸಿಸಲು ಸಮಯವಿಲ್ಲದೆ ಇಂದಿನ ಜಂಜಾಟದ ಒತ್ತಡದ ಬದುಕಿನಲ್ಲಿ ದಿನದ 24 ಗಂಟೆಯೂ ಸಹ ತನ್ನ ಕೆಲಸದ ನಡುವೆ ತನ್ನನ್ನೇ ತಾನು ಮರೆತುಹೋಗಿದ್ದಾನೆ. ತನ್ನ ಸಂತಸದ ಕ್ಷಣಗಳನ್ನು ಕೇವಲ ಮೊಬೈಲ್ ಟಿವಿ ಇವುಗಳಿಂದಲೇ ಹುಡುಕುವಂತಾಗಿದೆ ಎಂದು ಹೇಳಿದರು.
ನಮ್ಮ ಸಂಸ್ಥೆಯಲ್ಲಿ ವಿಭಿನ್ನ ಮಾದರಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಪೋಷಕರು ಕೂಡ ಸೆಳೆಯುವಂತಹ ನೃತ್ಯ, ರಂಗೋಲಿ, ಕ್ರೀಡಾ ಸ್ಪರ್ಧೆಗಳು ಹೀಗೆ ಅನೇಕ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಆ ಯೋಜನೆ ಮಾಡುತ್ತಾ ಬರಲಾಗಿದೆ. ಟೈಮ್ಸ್ ಚಿತ್ತಾರ ಚಿತ್ರಕಲಾ ಸ್ಪರ್ಧೆಯು ಒಂದು ವಿಭಿನ್ನ ಕಾರ್ಯಕ್ರಮವಾಗಿದ್ದು ತಮ್ಮಲ್ಲಿ ಅಡಗಿರುವಂತಹ ಮುಗ್ಧ ಚಿತ್ರಕಲ ಅನಾವರಣಕ್ಕೆ ಸಾಕ್ಷಿಯಾಗಿದೆ. ಇಂತಹ ಕಾರ್ಯಕ್ರಮಗಳು ಮುಂಬರುವ ವರ್ಷಗಳಲ್ಲಿಯೂ ಕೂಡ ಇನ್ನಷ್ಟು ವಿಭಿನ್ನ ಮಾದರಿಯಲ್ಲಿ ಮಾಡಲಾಗುವುದು ಎಂದರು.
ಟೈಮ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಬಿ. ಸುರೇಂದ್ರ ಮಾತನಾಡಿ, ಮಕ್ಕಳನ್ನು ನಾವು ಹಾಗೂ ಪೋಷಕರು ಇಬ್ಬರು ಕೇವಲ ಪಠ್ಯಕ್ಕೆ ಸೀಮಿತ ಮಾಡುತ್ತಿದ್ದೇವೆ, ಹಾಗಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ತರುವ ಮೂಲಕ ಈ ತರನಾದ ಕಾರ್ಯಕ್ರಮಗಳನ್ನು ಮಾಡುವುದರಿಂದ ಸುಲಭವಾದ ಕಲಿಕಾ ಕ್ರಮಗಳನ್ನು ಮಾಡಬಹುದಾಗಿದೆ. ಪೋಷಕರು ಮಕ್ಕಳ ಮೇಲೆ ಕೇವಲ ಓದುವಿಕೆಗಾಗಿಯೇ ಒತ್ತಡ ಹಾಕುವುದನ್ನು ಇದರಿಂದ ತಪ್ಪಿಸಬಹುದಾಗಿದೆ. ಜೊತೆಯಲ್ಲಿ ಮಕ್ಕಳಿಗೆ ತಮ್ಮ ಪೋಷಕರೊಂದಿಗೆ ಹಾಗೂ ಶಾಲೆಯೊಂದಿಗೆ ಸಂಬಂಧ ಗಟ್ಟಿ ಮಾಡಿಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಶಾಲೆ, ಮಕ್ಕಳು ಹಾಗೂ ಪೋಷಕರು ಈ ಮೂವರ ಸಂಬಂಧ ಉತ್ತಮವಾಗಿದ್ದರೆ ಶಿಕ್ಷಣದ ಗುಣಮಟ್ಟ ಹಾಗೂ ಶಿಕ್ಷಣವನ್ನು ಕಲಿಕೆ ಮಾರ್ಗವೂ ಸುಲಭವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಬಹುಮಾನ ನೀಡಿ ಗೌರವಿಸಿದರು.