ಟೈಟಾನ್ ವಾಚು ಬಿಡುಗಡೆ ಇಂದು

Published on

ಚಾಮರಾಜನಗರ: ಅನಿಕೇತನ ವೇದಿಕೆ ವತಿಯಿಂದ ಏ.30 ರಂದು ಡಾ.ದಿಲೀಪ್ ಎನ್ಕೆ ರಚನೆಯ ಇತ್ತಿಬ್ವಾಸನ ಟೈಟಾನ್ ವಾಚು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕೊಳ್ಳೇಗಾಲದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಖ್ಯಾತ ಕಥೆಗಾರ ಅಬ್ದುಲ್ ರಶೀದ್ ಪುಸ್ತಕ ಬಿಡುಗಡೆಗೊಳಿಸುವರು. ಕಥೆಗಾರ ಮಂಜುನಾಥ್ ಲತಾ ಕೃತಿ ಕುರಿತು ಮಾತನಾಡುವರು. ಪ್ರಾಧ್ಯಾಪಕರಾದ ಡಾ.ವಿಜಯಕುಮಾರಿ ಕರಿಕಲ್ ಅಧ್ಯಕ್ಷತೆ ವಹಿಸುವರು.

ಯುವ ಬರಹಗಾರ ದಾದಾಪೀರ್ ಜೈಮನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಾಹಿತಿ ಶಂಕನಪುರ ಮಹಾದೇವ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಸರ್ಕಾರಿ ನೌಕರರ ಸಂಘದ ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಎ.ಅಲೆಗ್ಸಾಂಡರ್ ಉಪಸ್ಥಿತಿ ಇರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net