

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಹುಬ್ಬಳ್ಳಿ ಟೈ ವತಿಯಿಂದ ಮಾ. 4 ಹಾಗೂ 5 ರಂದು ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ನಗರದ ಹೋಟೆಲ್ ಡೆನಿಸನ್ಸ್ನಲ್ಲಿ ಟೈಕಾನ್ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಟೈ ಹುಬ್ಬಳ್ಳಿ ಅಧ್ಯಕ್ಷೆ ಶ್ರಾವಣಿ ಪವಾರ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 4 ರಂದು ಮಹಿಳಾ ನವೋದ್ಯಮಿಗಳ ಸಮಾವೇಶ ಹಾಗೂ 5ರಂದು ಟೈಕಾನ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಎಂಟರ್ಪ್ರೖೆಸಿಸ್ ಆಫ್ ದಿ ಇಯರ್ ರಿಟೇಲ್, ಮ್ಯಾನುಫ್ಯಾಕ್ಚರಿಂಗ್, ಟೆಕ್ನಾಲಜಿ, ಸರ್ವಿಸಿಸ್, ಕೃಷಿ, ಫ್ಯಾಮಿಲಿ ಮ್ಯಾನೇಜ್ಡ್ ಬಿಜಿನೆಸ್, ಸೋಷಿಯಲ್ ಎಂಟರ್ಪ್ರೖೆಜ್ ಆಫ್ ದಿ ಇಯರ್, ಇನ್ನೋವೇಷನ್ ಆಫ್ ದಿ ಇಯರ್, ವುಮೆನ್ ಎಂಟರ್ಪ್ರಿನರ್ ಆಫ್ ದಿ ಇಯರ್, ಸಿಎಒ ಆಫ್ ದಿ ಇಯರ್ ಪ್ರಶಸ್ತಿಗಳನ್ನು ಉತ್ತರ ಕರ್ನಾಟಕ ಭಾಗದವರಿಗೆ ನೀಡಲಾಗುವುದು ಎಂದು ತಿಳಿಸಿದರು.
ಅರ್ಜಿ ಸಲ್ಲಿಸಲು ಫೆ. 20 ಕೊನೆಯ ದಿನವಾಗಿದೆ. ಖ್ಯಾತ ಉದ್ಯಮಿಗಳು, ನಾಯಕರು ಕಾರ್ಯಕ್ರಮಕ್ಕೆ ಆಗಮಿಸುವರು. ಮಾ. 5ರಂದು ಸಂಜೆ ನಡೆಯುವ ‘ಇವೆನಿಂಗ್ ವಿತ್ ಲೆಜೆಂಡ್ಸ್’ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದರು.
ಟೈ ವುಮೆನ್ ಕಾನ್ಕ್ಲೇವ್ನ ಶಿಲ್ಪಾ ಶೆಟ್ಟಿ, ಟೈ ಹುಬ್ಬಳ್ಳಿಯ ಪ್ರಶಾಂತ ಹೆಬಸೂರ, ಸಂತೋಷ ಕೊಟ್ಲಿ ಸುದ್ದಿಗೋಷ್ಠಿಯಲ್ಲಿದ್ದರು.