

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಸ್ಸಾಂನ ಗುವಾಹಟಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 39ನೇ ರಾಷ್ಟ್ರ ಮಟ್ಟದ ಸೀನಿಯರ್ ಟೇಕ್ವಾಂಡೊ ಕ್ರೀಡಾಕೂಟದಲ್ಲಿ ಧಾರವಾಡ ಸ್ಪರ್ಧಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಜಿಲ್ಲಾ ಟೇಕ್ವಾಂಡೊ ಸಂಸ್ಥೆ ಅಧ್ಯಕ್ಷ ಆನಂದ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ವಿಭಾಗದಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿದ್ದ ಅದಿತಿ ಪರಪ್ಪ ಕ್ಷಾತ್ರತೇಜ 53 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಪುರುಷರ ವಿಭಾಗದಲ್ಲಿ ದಿತಿಷ ಶೆಟ್ಟಿ 80 ಕೆಜಿ ವಿಭಾಗದಲ್ಲಿ ಕ್ವಾಟರ್ ಫೈನಲ್ ತಲುಪಿದ್ದಾರೆ. ಇವರು ಗೋವಾದಲ್ಲಿ ನಡೆಯಲಿರುವ 37ನೇ ನ್ಯಾಷನಲ್ ಗೇಮ್ಸ್ಗೆ ಸಹ ಆಯ್ಕೆಯಾಗಿದ್ದಾರೆ ಎಂದರು.
ಉಳಿದಂತೆ ಸುಪ್ರಿತ ಥಿಟೆ, ಸ್ಪೂರ್ತಿ ನಿಕಂ, ಸಹನಾ ಗೋಕಾವಿ, ನಿರಂಜನ ಆನಿಕಿವಿ, ನಮಿತಕುಮಾರ ಸುಣಗಾರ ಸಹ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂದರು.
ಅಂಜಲಿ ಪರಪ್ಪ, ಶೋಭಾ ರಸಾಳಕರ, ಇತರರು ಇದ್ದರು.