ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ

14-NPK-3
ಬಲ್ಲಮಾವಟಿ ಗ್ರಾಮದ ಬಜರಂಗಿ ಯೂತ್ ಕ್ಲಬ್ ವತಿಯಿಂದ ಭಾನುವಾರ ನಡೆದ ಶರತ್ ಫ್ರೆಂಡ್ಸ್ ದೊಡ್ಡಪುಲಿಕೋಟು ತಂಡಗಳು ಸೆಮಿಫೈನಲ್ ಪ್ರವೇಶಿಸಿದವು.
Published on

ನಾಪೋಕ್ಲು: ಬಲ್ಲಮಾವಟಿ ಗ್ರಾಮದ ಬಜರಂಗಿ ಯೂತ್ ಕ್ಲಬ್ ವತಿಯಿಂದ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಗ್ರಾಮ ಪಂಚಾಯಿತಿ ಸದಸ್ಯ ಚೋಕಿರ ಬಾಬಿ ಭೀಮಯ್ಯ ಚಾಲನೆ ನೀಡಿದರು.

ಭಾನುವಾರ ಕೆ-12 ವಾರಿಯರ್ಸ್ ಕೊಡಗು ಹಾಗೂ ಶರತ್ ಫ್ರೆಂಡ್ಸ್ ದೊಡ್ಡಪುಲಿಕೋಟು ತಂಡಗಳು ಸೆಮಿಫೈನಲ್ ಪ್ರವೇಶಿಸಿದವು. ಉಳಿದಂತೆ ಶ್ರೀ ಕೃಷ್ಣ ಫ್ರೆಂಡ್ಸ್ ತಂಡದ ವಿರುದ್ಧ ಮಾರುತಿ ಯೂತ್ ಕ್ಲಬ್, ಗ್ರೀನ್ ಪೋರ್ಟ್ ತಂಡದ ವಿರುದ್ಧ ಅಪೊಲೊ ಯೂತ್ ಕ್ಲಬ್ ಬಲ್ಲಮಾವಟಿ, ಅಫಿಶಿಯಲ್ಸ್ ನಾಲ್ಕುನಾಡು ತಂಡದ ವಿರುದ್ಧ ಟೀಮ್ ಪಾಲೂರು, ಹಬೀಬ ಕ್ರಿಕೆಟರ್ಸ್ ವಿರುದ್ಧ ದೊಡ್ಡ ಪುಲಿಕೋಟಿವಿನ ಶರತ್ ಫ್ರೆಂಡ್ಸ್, ಕೀರ್ತಾಜೆ ವಾರಿಯರ್ಸ್ ವಿರುದ್ಧ ಟೀಮ್ ನೆಲಜಿ ಮಕ್ಕ, ಟೀಂ ಫೇಮಸ್ ವಿರುದ್ಧ ಕೆ-12 ವಾರಿಯರ್ಸ್ ಕೊಡಗು, ವೀಕೆಂಡ್ ವಾರಿಯರ್ಸ್ ವಿರುದ್ಧ ಬ್ಯಾಕ್ ಮಾಂಬಾ ಹಾಗೂ ಬ್ಲಾಕ್ ಕ್ಯಾಪ್ಸ್ೃ ವಿರುದ್ಧ ಎಮ್ಮೆಮಾಡು ತಂಡಗಳು ಗೆಲುವು ಸಾಧಿಸಿದವು.

ಮೂರು ದಿನಗಳ ಕಾಲ ಟೂರ್ನಿ ನಡೆಯಲಿದ್ದು, 36 ತಂಡಗಳು ಪಾಲ್ಗೊಳ್ಳಲಿವೆ. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ, ಬಜರಂಗಿ ಯೂತ್ ಕ್ಲಬ್ ಅಧ್ಯಕ್ಷ ಎಡಿಕೇರಿ ಪ್ರಸನ್ನ, ಸದಸ್ಯರಾದ ಎಡಿಕೇರಿ ರಾಜೇಶ್, ಕೋಟೇರ ನೂತನ್, ಎಡಿಕೇರಿ ಕೀರ್ತನ್, ವಚನ್, ಸುಧೀರ್, ಚರಣ್, ವಿನು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net