ಟೆಡ್ಡಿ ಬೇರ್​ ಧರಿಸಿ ಆಗಮಿಸಿದ್ದಾ ಅಭಿಮಾನಿ

Published on

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಳ್ಳಾರಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್​​​​ ಅವರನ್ನು ನೋಡಲು ಅಭಿಮಾನಿಯೋರ್ವ ಟೆಡ್ಡಿ ಬೇರ್​ ಧರಿಸಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಆಗಮಿಸಿದ್ದಾನೆ.

ಬಳ್ಳಾರಿ ಕೇಂದ್ರ ಕಾರಾಗೃಹದೆದುರು ಇಂದು ಬೆಳಗ್ಗೆ ಅಭಿಮಾನಿ ಕಾರ್ತಿಕ್ ಎಂಬಾತ ಕಾಣಿಸಿಕೊಂಡಿದ್ದಾನೆ. ಟೆಡ್ಡಿಬೇರ್​ ಉಡುಪು ಧರಿಸಿ, We are waiting you D'BOSS ಎಂಬ ಸಂದೇಶದ ಫಲಕ ಹಿಡಿದು ನಿಂತಿದ್ದ. ದರ್ಶನ್ ಆದಷ್ಟು ಬೇಗ ಜೈಲಿನಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತಿರುವ ಈತ ಜೈಲು ಸಿಬ್ಬಂದಿಯನ್ನು ಮಾತನಾಡಿಸಿದ್ದಾನೆ. ಈ ವೇಳೆ ಆರೋಪಿಯ ಭೇಟಿಗೆ ಹೊರಗಿನವರಿಗೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net