ಟೆಕ್ನೋ ಕಲ್ಚರಲ್ ಫೆಸ್ಟ್ ಮೇ 16ರಂದು

Namoshi
Published on

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿAಗ್ ಕಾಲೇಜಿನ ಸ್ಯಾಕ್ ಕಟ್ಟಡದ ಸಭಾಂಗಣದಲ್ಲಿ ಗುರುವಾರ ಬೆಳಗ್ಗೆ ೧೦.೩೦ಕ್ಕೆ ಅಂತರ್ ಮಹಾವಿದ್ಯಾಲಯ ಟೆಕ್ನೋ ಕಲ್ಚರಲ್ ಫೆಸ್ಟ್ ನಿರ್ಮಾಣ-೨೦೨೪ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ ತಿಳಿಸಿದರು.
ಮುಂಬೈನ ನಟ ಅಭಿಷೇಕ ಗಿತೆ ಕಾರ್ಯಕ್ರಮ ಉದ್ಘಾಟಿಸುವರು. ಬೆಂಗಳೂರಿನ ನಿಂಬಲ್ ವಿಷನ್ ಪ್ರೆÊವೆಟ್ ಲಿ. ಸಿಒಇ ಚಿನ್ನಯ್ಯ ಮಠ, ಬೆಂಗಳೂರು ಮೇದಿನಿ ಟೆಕ್ನಾಲಜೀಸ್ ಎಂಡಿ ಪ್ರದೀಪ ಕಲ್ಲೂರ್ ಮುಖ್ಯ ಅತಿಥಿಯಾಗಿದ್ದು, ಸಂಸ್ಥೆ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಶ ಪಾಟೀಲ್ ಮತ್ತು ಆಡಳಿತ ಮಂಡಳಿ ಸದಸ್ಯರು ಆಹ್ವಾನಿತರಾಗಿದ್ದಾರೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
೨೦೧೨ರಿಂದ ಈ ಕಾರ್ಯಕ್ರಮದ ಮೂಲಕ ಇಂಜಿನಿಯರಿAಗ್ ಹೊರತುಪಡಿಸಿದ ವಿದ್ಯಾರ್ಥಿಗಳು ತಮ್ಮ ಕೌಶಲ, ಪ್ರತಿಭೆ ಹೊರಹಾಕಲು ವೇದಿಕೆ ಕಲ್ಪಿಸಲಾಗುತ್ತಿದೆ. ಹಾಡು, ಡಾನ್ಸ್, ಪ್ಲೇ, ಮಿಮಿಕ್ರಿ, ಏಕಪಾತ್ರಾಭಿನಯ ಇತರ ಈವೆಂಟ್ಸ್ ಗುರುವಾರ ಸಂಜೆ ನಡೆಯಲಿವೆ. ಮರುದಿನ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಡಿಜೆ ಈವೆಂಟ್ ಆಯೋಜಿಸಿದ್ದು, ಅಗತ್ಯ ಹಣಕಾಸು ನೆರವು ಆಡಳಿತ ಮಂಡಳಿ ಒದಗಿಸಿದೆ ಎಂದರು.
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವುದು, ಸಂಘಟನಾ ಕೌಶಲ, ಟೈಂ ಮತ್ತು ಫೈನಾನ್ಸಿಯಲ್ ಮ್ಯಾನೇಜ್‌ಮೆಂಟ್, ಗುಂಪಿನಲ್ಲಿ ಕೂಡಿ ಕೆಲಸ ಮಾಡುವುದು, ಆರೋಗ್ಯಕರ ಸಂಬAಧ ಮತ್ತು ವಿದ್ಯಾರ್ಥಿಗಳು ವಿವಿಧ ವಿಭಾಗಗಳೊಂದಿಗೆ ಸಂವಾದಕ್ಕೆ ಅನುಕೂಲ ಕಲ್ಪಿಸಲಾಗಿದೆ. ಗುರುವಾರ ಬೆಳಗ್ಗೆ ೬ಕ್ಕೆ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಂಸ್ಥೆ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಅನೀಲ ಮರಗೋಳ, ಘಂಟಿ, ನಿಶಾಂತ್, ಡಾ.ಶರಣಬಸಪ್ಪ ಹರವಾಳ, ಪ್ರಾಚಾರ್ಯ ಡಾ.ಎಸ್.ಆರ್.ಮೀಸೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net