ಮೈಸೂರು: ವೇಗವಾಗಿ ಸೈಕಲ್‌ನಲ್ಲಿ ಬಂದ ಮಕ್ಕಳು ನಿಯಂತ್ರಿಸಲಾಗದೆ ಟೆಂಪೋ ಹಿಂದಿನ ಚಕ್ರದಡಿ ಸಿಲುಕಿದ್ದು, ಒಬ್ಬ ಮೃತಪಟ್ಟು ಮತ್ತೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮೂಲತಃ ಯಳಂದೂರಿನ ರಾಮಣ್ಣ ಅವರ ಪುತ್ರ ಬಾಲಾಜಿ ಅಲಿಯಾಸ್ ತಿರುಪತಿ (10) ಮೃತ ಬಾಲಕ.
ನಗರದ ಅಭಿಷೇಕ್ ವೃತ್ತದ ಬಳಿ ವಾಸವಾಗಿದ್ದ ಬಾಲಾಜಿ ಶುಕ್ರವಾರ ಶಾಲೆ ಮುಗಿಸಿಕೊಂಡು ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಹೋಗುತ್ತಿದ್ದ ಟೆಂಪೋ ಹಿಂಬದಿ ಚಕ್ರಕ್ಕೆ ಸಿಲುಕಿ, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮತ್ತೊಬ್ಬ ಬಾಲಕ ಸೈಕಲ್‌ನಿಂದ ಬಿದ್ದಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.