

ಗುರುಮಠಕಲ್: ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ಬರುವ ಏಳು ಜಿಲ್ಲೆಗಳಲ್ಲಿ ಮಂಜೂರಾಗಿರುವ ಅನುದಾನವನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ(ಕೆಟಿಪಿಪಿ) ಕಾಯಿದೆ ಅನುಸಾರ ಟೆಂಡರ್ ಪಾರದರ್ಶಕವಾಗಿ ಅನುಷ್ಠಾನಗೊಳಿಸಬೇಕು ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ನರಸಾರೆಡ್ಡಿ ಪೊಲೀಸ್ ಪಾಟೀಲ್ ಆಗ್ರಹಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ ಅವರು, ಅನುದಾನವನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ(ಕೆಟಿಪಿಪಿ) ಕಾಯಿದೆ ಅನುಸಾರ ಟೆಂಡರ್‌ಗಳನ್ನು ಪಾರದರ್ಶಕವಾಗಿ ಅನುಷ್ಠಾನವಾಗುತ್ತಿಲ್ಲ. ಹೀಗಾಗಿ ಅದನ್ನು ಪಾರದರ್ಶವಾಗಿ ಅನುಷ್ಠಾನ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಾಲೂಕು, ಗ್ರಾಪಂ, ವಿಧಾನಸಭೆ ಮತ್ತು ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಕೆಟಿಪಿಪಿ (ಇ- ಟೆಂಡರ್ ಪ್ರಕಟಣೆ) ಕಾಮಗಾರಿಗಳು ಯಾವುದೇ ಸಾರ್ವಜನಿಕರಗ ಗಮನಕ್ಕೆ ಬರುವ ರೀತಿಯಲ್ಲಿ ನಾಮಫಲಕ ಇರುವುದಿಲ್ಲ. ಎಲ್ಲ ಕಾಮಗಾರಿಗಳು ಮತ್ತು ಏಜೆನ್ಸಿ ಹೆಸರು, ಮಾಹಿತಿಗಳು ಸಹ ಸಾರ್ವಜನಿಕರಿಗೆ ಗೊತ್ತಾಗುವುದಿಲ್ಲ ಎಂದು ಹೇಳಿದರು.
ಹೀಗೆ ಅನೇಕ ಕಾಮಗಾರಿಗಳು ಕೆಆರ್‌ಐಡಿಎಲ್ ಮತ್ತು ನಿರ್ಮಿತ ಕೇಂದ್ರಗಳು ಕಾಮಗಾರಿ ನಿರ್ವಹಿಸುತ್ತಿದ್ದು, ಎಲ್ಲ ಕಡೆ ಕೆಟಿಪಿಪಿ (ಇ-ಟೆಂಡರ್ ಪ್ರಕಟಣೆ) ನಿಯಮ ಪಾಲಿಸದೆ ಎಲ್ಲ ಕಡೆ ಕಳಪೆ ಕಾಮಗಾರಿ ಮಾಡುತಿದ್ದು ಸಾರ್ವಜನಿಕರ ಗಮನಕ್ಕೆ ಬಂದಿರುತ್ತದೆ. ಕೆಲವು ಕಾಮಗಾರಿ ಮಾಡದೇ ಅನುದಾನಗಳನ್ನು ಬಿಡುಗಡೆ ಮಾಡಿಸಿರುತ್ತಾರೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಮಂಗಳಿಗೆ ಬರುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಕೆಯಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ವೇಳೆ ಕಾರ್ಯಾಧ್ಯಕ್ಷ ಬಸವರಾಜ ಆರ್. ದಳಪತಿ, ಪ್ರಧಾನ ಕಾರ್ಯದರ್ಶಿ ಬಸವರೆಡ್ಡಿ ಪಾಟೀಲ್ ಇದ್ದರು.