ಟೆಂಗಿನೊಳಗೆ ರುದ್ರಾಕ್ಷಿ, ಹೂಗಳು !

03
Published on

ಕೊಡೇಕಲ್ : ರಾಯನಪಾಳೆ ಹತ್ತಿರದ ಗುಡ್ಡಗಾಡು ಪ್ರದೇಶದಲ್ಲಿರುವ ಹಲವುಕಲ್ಲೇಶ್ವರ ದೇವಸ್ಥಾನದಲ್ಲಿ ಶನಿವಾರ ಜರುಗಿದ ಹನುಮಪ್ಪ ದೇವರ ಜಾತ್ರೋತ್ಸವದಲ್ಲಿ ಭಕ್ತನೊಬ್ಬ ಒಡೆದ ಟೆಂಗಿನ ಕಾಯಿಯೊಳಗೆ ರುದ್ರಾಕ್ಷಿ ಮತ್ತು ಹೂವು ಕಾಣಿಸಿ ಅಚ್ಚರಿ ಮೂಡಿಸಿದೆ. ಉತ್ಸವದಲ್ಲಿ ಪಾಲ್ಗೊಂಡ ಭಕ್ತರು ಇದು ದೇವರ ಪವಾಡವೆಂದು ಕೈಮುಗಿದು ನಮಿಸಿದ್ದಾರೆ.

ಶ್ರಾವಣ ಮಾಸದ ಕೊನೆಯ ಶನಿವಾರ ಪುರಾಣ ಪ್ರಸಿದ್ದ ಶ್ರೀ ಹಲವುಕಲ್ಲೇಶ್ವರ ದೇವಸ್ಥಾನದಲ್ಲಿ ವಿರಾಜಮಾನನಾಗಿರುವ ಹನುಮಪ್ಪ ದೇವರಿಗೆ ಪಲ್ಲಕ್ಕಿ ಉತ್ಸವ, ಗೋಪಾಳ ಸೇವೆ ಮತ್ತು ದೇವರ ಹೇಳಿಕೆ ಕಾರ್ಯಕ್ರಮಗಳು ಶತಮಾನಗಳಿಂದ ನಡೆದುಕೊಂಡು ಬರುತ್ತಿದೆ. ಅದರಂತೆ ಶನಿವಾರ ಬೆಳಗ್ಗಿನ ಜಾವ ದೇವರ ಗಂಗಾಸ್ನಾನ ಮುಗಿಸಿ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ವಾದ್ಯ-ಮೇಳಗಳೊಂದಿಗೆ ದೇವಸ್ಥಾನಕ್ಕೆ ತಲುಪಿದ ಬಳಿಕ ಗರ್ಭಗುಡಿಯಲ್ಲಿ ದೇವರು ವಿರಾಜಿತನಾದ ನಂತರ ನಡೆದ ಗೋಪಾಳ ಸೇವೆಯಲ್ಲಿ ಭಕ್ತರು ಭಕ್ತಿಯಿಂದ ಗೋಪಾಳ ತುಂಬಿದರು. ಈ ಎಲ್ಲ ಸೇವೆಗಳ ಬಳಿಕ ನಡೆದ ಪ್ರಸಂಗವೊAದು ಭಕ್ತರನ್ನು ದಿಗ್ಭö್ರಮೆಗೊಳಿಸಿದೆ.

ಗೋಪಾಳ ಸೇವೆ ಸಂಪನ್ನಗೊAಡ ನಂತರ ದೇವರ ಹೇಳಿಕೆ ವೇಳೆ ಭಕ್ತರೊಬ್ಬರ ಮೈಮೇಲೆ ಹನುಮಪ್ಪ ದೇವರು ಕಾಣಿಸಿಕೊಂಡ ಕಾರಣ ದೇವಾಲಯ ಆವರಣದಲ್ಲಿ ಕುಣಿಯುತ್ತ ಕೇಕೆ ಹಾಕುತ್ತ ಹೆಜ್ಜೆ ಹಾಕುತ್ತ ಅಲ್ಲಿದ್ದ ಟೆಂಗಿನಕಾಯಿಗಳನ್ನು ಕೈಯಲ್ಲಿ ಹಿಡಿದು ಕೆಲವೆಡೆ ಒಡೆಯುತ್ತ ಸಾಗಿದ. ದೇವಸ್ಥಾನದಲ್ಲಿರುವ ದೇವರ ಬಾವಿಯ ಒಂದು ಬದಿಯಲ್ಲಿ ಒಡೆದ ಟೆಂಗಿನಲ್ಲ ಹೂಗಳು ಬಂದರೆ, ಇನ್ನೊಂದು ಬದಿಯಲ್ಲಿ ಒಡೆದ ಟೆಂಗಿನಕಾಯಿ ಒಳಗೆ ಕೆಂಪು ಬಣ್ಣದ ರುದ್ರಾಕ್ಷಿಗಳು ಕಾಣಸಿಕೊಂಡು ಭಕ್ತರಲ್ಲಿ ಅಚ್ಚರಿ ಮೂಡಿಸಿತು.

ಕಣ್ಣಾರೆ ಕಂಡ ಭಕ್ತರು ಮನದಲ್ಲಿ ಹನುಮಪ್ಪನನ್ನು ನೆನೆದು ಕೈ ಮುಗಿದರು. ನಂತರ ದೇವರು ಕಾಣಿಸಿಕೊಂಡ ಭಕ್ತನ ಹಣೆಗೆ ದೇವರ ಆಧಾರವನ್ನು ಹಚ್ಚಿದ ಬಳಿಕ ಮೊದಲಿನಂತಾಗಿದ್ದಾನೆ. ಈ ಎಲ್ಲ ಪವಾಡ ನೋಡಿದ ಭಕ್ತರು ಪ್ರಸಾದ ಸ್ವೀಕರಿಸಿ ಮರಳಿದರು. ಮೈ ಮೇಲೆ ದೇವರು ಕಾಣಿಸಿಕೊಂಡ ಭಕ್ತ ಕುಣಿಯುತ್ತ ಟೆಂಗಿನಕಾಯಿ ಒಡೆಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net