ಟೋಲ್ ಪ್ಲಾಜಾ ಅವೈಜ್ಞಾನಿಕ ಎಂದು ದೂರು

IMG-20230621-WA0090
Published on

ಮೈಸೂರು: ನಂಜನಗೂಡು-ಊಟಿ ರಾಷ್ಟ್ರೀಯ ಹೆದ್ದಾರಿಯ ಕಡಕೊಳದ ಬಳಿ ನಿರ್ಮಿಸಿರುವ ಟೋಲ್ ಪ್ಲಾಜಾ ಅವೈಜ್ಞಾನಿಕವಾಗಿದ್ದು, ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ (ರೈತ ಪರ್ವ)ದಿಂದ ಜಿಲ್ಲಾ ಪೊಲೀಸ್ ಅಧಿಕಾರಿಗೆ ದೂರು ನೀಡಲಾಗಿದೆ.
ಹೆದ್ದಾರಿಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾದ ಹೆದ್ದಾರಿ ಪ್ರಾಧಿಕಾರ, ಹದಗೆಟ್ಟ ರಸ್ತೆಗೆ ಟೋಲ್ ಸಂಗ್ರಹಿಸುತ್ತಿದೆ. ಕಡಕೊಳ ಈಗ ಪಟ್ಟಣ ಪಂಚಾಯಿತಿ ಅಗಿದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಯ 5 ಕಿ.ಮೀ. ವ್ಯಾಪ್ತಿಯಲ್ಲಿ ಸ್ಥಳೀಯರಿಗೆ ಟೋಲ್ ಪ್ಲಾಜ್‌ಗೆ ಪರ್ಯಾಯ ರಸ್ತೆ ನಿರ್ಮಿಸಿಕೊಡಬೇಕು ಎನ್ನುವ ನಿಯವವನ್ನು ಪಾಲಿಸುತ್ತಿಲ್ಲ. ತುರ್ತು ಸಹಾಯವಾಣಿಗೆ 10 33 ಇದು ಬಹುತೇಕ ಸಂದರ್ಭದಲ್ಲಿ ಸಂಪರ್ಕಕ್ಕೆ ಸಿಗುವುದಿಲ್ಲ. ವಾಹನ ಕೆಟ್ಟರೆ ವಾಹನಗಳನ್ನು ಎಳೆದೊಯ್ಯಲು ಕ್ರೇನ್ ವ್ಯವಸ್ಥೆ ಇಲ್ಲ ಎಂದು ದೂರಿದರು.
ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎನ್ನುವ ನಿಯಮವಿದ್ದು, ಸ್ಥಳೀಯರಿಗೆ ಉದ್ಯೋಗ ದೊರೆತಿಲ್ಲ. ಹೊರಗಿನಿಂದ ಬಂದವರು ಪ್ರಯಾಣಿಕರೊಂದಿಗೆ ದರ್ಪದಿಂದ ವರ್ತಿಸುತ್ತಿದ್ದಾರೆ. ಸ್ಥಳೀಯ ನಿವಾಸಿಗಳು ಸಹ ಟೋಲ್ ಕಟ್ಟಬೇಕಾದ ಸ್ಥಿತಿ ಉಂಟಾಗಿದೆ. ಆದ್ದರಿಂದ ಈ ಬಗ್ಗೆ ತಪ್ಪಿತ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಯಿತು.
ಮುಖಂಡರಾದ ಅರುಣ್‌ಕುಮಾರ್, ರವೀಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net