ಟೀಕಾರಾಯರ ಸನ್ನಿಧಿಯಲ್ಲಿ ಸ್ವಚ್ಛತಾ ಕಾರ್ಯ

mlk
ಮಳಖೇಡದಲ್ಲಿ ಹರಿಯುತ್ತಿರುವ ಕಾಗಿಣಾ ನದಿಯನ್ನು ಸ್ವಚ್ಛಗೊಳಿಸುತ್ತಿರುವ ಯುವಕರು.
Published on

ಕಲಬುರಗಿ: ಸೇಡಂ ತಾಲೂಕಿನ ಮಳಖೇಡದ ಕಾಗಿಣಾ ತಟದಲ್ಲಿರುವ ಉತ್ತರಾದಿ ಮಠದಲ್ಲಿ ಹೈದರಾಬಾದ್‌ನ ಭಾಗ್ಯನಗರ ಯುವಾತ್ಮ ತಂಡದಿAದ ಎರಡು ದಿನ ಸ್ವಚ್ಛತಾ ಕಾರ್ಯ ನಡೆದಿದ್ದು, ಶ್ರೀಮಠ ಶುಚಿಯಾಗಿ ಕಂಗೊಳಿಸುತ್ತಿದೆ.

ಮಳಖೇಡದ ಉತ್ತರಾದಿ ಮಠದಲ್ಲಿ ಜು.24, 25 ಹಾಗೂ 26ರಂದು ಶ್ರೀ ಜಯತೀರ್ಥ ಆರಾಧನೆ ನಡೆಯಲಿದ್ದು, ಇದರ ನಿಮಿತ್ತ ಜು.12, 13ರಂದು ಪಂ. ವಾಸುದೇವಾಚಾರ್ಯ ನೇತೃತ್ವದಲ್ಲಿ ಯುವಕ-ಯುವತಿಯರನ್ನೊಳಗೊಂಡ ಸುಮಾರು 70 ಸೇವಾಕರ್ತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಯತಿಗಳ ಮೂಲವೃಂದಾವನ ಸನ್ನಿಧಾನ, ಮೂಲ ರಾಮದೇವರ ಪೂಜೆ ಕಟ್ಟೆ, ಪ್ರದಕ್ಷಿಣೆ ಹಾಲ್, ಶ್ರೀಗಳು ಸಂಧ್ಯಾವAದನೆ ನೆರವೇರಿಸುವ ಕಟ್ಟೆ, ಎರಡು ಭೋಜನ ಶಾಲೆಗಳು, ಪಂಡಿತರು ಉಳಿದುಕೊಳ್ಳುವ ರೂಮ್‌ಗಳು, ಭಕ್ತರು ಉಳಿದುಕೊಳ್ಳುವ ರೂಮ್‌ಗಳ ಹಿಂದಿನ ಶೌಚಗೃಹಗಳು, ಮಹಾದ್ವಾರವನ್ನು ಶುಚಿಗೊಳಿಸಿದರು.

ನದಿಗೆ ಹೊಸ ಕಳೆ: ಕಾಗಿಣೆ ನದಿಯಲ್ಲಿ ವಿಪರೀತ ಹುಲ್ಲುಗಳು ಬೆಳೆದು ನೀರಿನಲ್ಲಿ ಇಳಿಯಲು ಕಷ್ಟವಾಗಿತ್ತು. ಹೀಗಾಗಿ ಭಾಗ್ಯನಗರ ಯುವಾತ್ಮ ಟೀಮ್ ಶ್ರೀಮಠಕ್ಕೆ ಹೊಂದಿಕೊAಡAತಿರುವ ನದಿಯಲ್ಲಿನ ಹುಲ್ಲು, ಕಡ್ಡಿ ಹಾಗೂ ಇನ್ನಿತರ ಸಸಿಗಳನ್ನು ತೆರವುಗೊಳಿಸಿತು. ಬಳಿಕ ಮೆಟ್ಟಿಲುಗಳ ಮೇಲೆ ಬಿದ್ದಿದ್ದ ಬಟ್ಟೆ, ಇನ್ನಿತರ ವಸ್ತುಗಳನ್ನು ಬೇರೆಡೆ ಸಾಗಿಸಿತು. ಇದೀಗ ಕಾಗಿಣೆಗೆ ಹೊಸ ಕಳೆ ಬಂದAತಾಗಿದೆ. ಶೀಮಠ ವ್ಯವಸ್ಥಾಪಕರಾದ ಪಂ.ವೆAಕಣ್ಣಾಚಾರ ಪೂಜಾರ್ ಇತರರು ಯುವಾತ್ಮ ಟೀಮ್‌ನ ಯುವಕರಿಗೆ ಸಾಥ್ ನೀಡಿದರು.

ಸಂಭ್ರಮದ ಆರಾಧನೆ ಮಹೋತ್ಸವ: ಮಳಖೇಡದಲ್ಲಿ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರ ಸಾನ್ನಿಧ್ಯದಲ್ಲಿ ಶ್ರೇಷ್ಠ ಯತಿಗಳು, ಮಹಾನುಭಾವರಾದ ಶ್ರೀ ಜಯತೀರ್ಥರ ಆರಾಧನೆ ಮಹೋತ್ಸವ ಜು.24, 25 ಹಾಗೂ 26ರಂದು ಸಂಭ್ರಮದಿAದ ನಡೆಯಲಿದೆ. ಮೂರು ದಿನಗಳ ಕಾಲ ಯತಿಗಳ ಮೂಲ ವೃಂದಾವನಗಳಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುಗಳ ದರ್ಶನಾಶೀರ್ವಾದ ಪಡೆದು ಕೃತಾರ್ಥರಾಗಬೇಕು ಎಂದು ಮಳಖೇಡ ಉತ್ತರಾದಿ ಮಠದ ವ್ಯವಸ್ಥಾಪಕರಾದ ಪಂ.ವೆAಕಣ್ಣಾಚಾರ ಪೂಜಾರಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net