ಟೀಕಾಚಾರ್ಯರ ಸಂಭ್ರಮದ ಪೂರ್ವಾರಾಧನೆ

YARAGOL
Published on

ಯಾದಗಿರಿ: ತಾಲೂಕಿನ ಯರಗೋಳ ಗ್ರಾಮದಲ್ಲಿ ಭಾನುವಾರ ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದ  ಟೀಕಾಚಾರ್ಯರ ಪೂರ್ವಾರಾಧನೆ  ಬಹು ವಿಜೃಂಭಣೆಯಿಂದ ಜರುಗಿತು.
ಉತ್ತರದಿ ಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮತೀರ್ಥರ ಪಾದಂಗಳವರು  ಮಂಗಳಾರತಿ, ಮೂಲ ರಾಮದೇವರ ಪೂಜೆ, ತೀರ್ಥ, ಪ್ರಸಾದ, ಮಂತ್ರಾಕ್ಷತೆ,  ತಪ್ತಮುದ್ರಾ ಧಾರಣೆ ನೆರವೇರಿಸಿ, ಆಶೀರ್ವಚನ ನೀಡಿದರು.

ಸಾವಿರಾರು ಸಂಖ್ಯೆಯ ಭಕ್ತರು ಟೀಕಾರಾಯರು ಗ್ರಂಥ ರಚಿಸಿದ ಗುಹೆಯ ದರ್ಶನ ಪಡೆದು ಪುನೀತರಾದರು. ಮಹಿಳಾ, ಪುರುಷ ಭಜನಾ ತಂಡದವರು ಹಾಡುಗಳನ್ನು ಹಾಡಿ ಭಕ್ತಿ ಸಮರ್ಪಿಸಿದರು.

ಯುವಕರು, ಯುವತಿಯರು, ಮಕ್ಕಳು, ವೃದ್ದರು ಹೊಸ ರೇಷ್ಮೆ ವಸ್ತ್ರಗಳನ್ನು ಧರಿಸಿ ಆಗಮಿಸಿದ್ದು ವಿಶೇಷತೆ ಕಾಣಿಸಿತು.
ತುಂತುರು ಮಳೆಯ ನಡುವೆಯೂ, ನೂರಾರು ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದ್ದರು, ನೆರೆಯ ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದ ಆಗಮಿಸಿ ಗುಹೆಯಲ್ಲಿನ ಟೀಕಾರಾಯರ ದರ್ಶನ ಪಡೆದು ಪುನೀತರಾದರು. ಆರಾಧನೆಗೆ ಆಗಮಿಸಿದ ಭಕ್ತರಿಗೆ ಜಾಮೂನು, ಕುಪುರಿ, ಅನ್ನ,ಸಾಂಬಾರ, ಮಜ್ಜಿಗೆ  ರ್ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net