ಟಿಸಿಗೆ ಲೋಡ್ ತಪ್ಪಿಸಲು ಆಗ್ರಹ, ತಾಂಬಾ ಗ್ರಾಮಸ್ಥರಿಂದ ಪ್ರತಿಭಟನೆ

load for tc, tamba, protest, indi, shirastedara,
ಇಂಡಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕರವೇ ಕಾರ್ಯಕರ್ತರು, ತಾಂಬಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಶಿರಸ್ತೇದಾರ ಎಸ್.ಆರ್. ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು. ಅಲ್ಲಾಬಕ್ಷ ದಡೇದ, ಅಬ್ದುಲ್ ದಡೇದ, ಮುದಕಪ್ಪ ಕಲ್ಲೂರ, ಹುಚ್ಚಪ್ಪ ಕಾಂಬಳೆ ಇತರರಿದ್ದರು.
Published on

ಇಂಡಿ: ತಾಲೂಕಿನ ತಾಂಬಾ ಗ್ರಾಮದ ಹೆಸ್ಕಾಂ ಅಧಿಕಾರಿ ಸದ್ಯ ಟಿಸಿಗೆ ಕನೆಕ್ಷನ್‌ಯಿದ್ದರೂ ಮತ್ತೆ ಹೆಚ್ಚಿಗೆ ಕನೆಕ್ಷನ್ ನೀಡಿ ಒಂದೂ ಮೋಟಾರ್‌ಗಳು ಚಾಲು ಆಗದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಬುಧವಾರ ಕರವೇ ಕಾರ್ಯಕರ್ತರು, ತಾಂಬಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಶಿರಸ್ತೇದಾರ ಎಸ್.ಆರ್. ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು.

ಅಲ್ಲಾಬಕ್ಷ ದಡೇದ ಗೊರೆ ಮಾತನಾಡಿ, 10 ವರ್ಷಗಳ ಹಿಂದೆ ನಾಲ್ಕು ರೈತರಿಗೆ ಟ್ರಾನ್ಸ್‌ಫಾರ್ಮರ್ ನೀಡಿದ್ದು, ಈಗ ಆ ಟಿಸಿಗೆ ಮತ್ತೆ ಹೆಚ್ಚಿನ ಕನೆಕ್ಷನ್ ನೀಡಿದ್ದರಿಂದ ಲೋಡ್ ಹೆಚ್ಚಾಗುತ್ತಿದೆ. ಒಂದು ಮೋಟಾರ್ ಸಹ ಆರಂಭವಾಗದಂತಾಗಿದೆ. ಹೀಗಾಗಿ ಮೇಲಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅಬ್ದುಲ್ ದಡೇದ, ಮುದಕಪ್ಪ ಕಲ್ಲೂರ, ಹುಚ್ಚಪ್ಪ ಕಾಂಬಳೆ, ಮಾಸೀಮ ಮಂಗಳಖೇಡ, ಸಿದ್ದು ಶಿರಶ್ಯಾಡ, ಮಹಮ್ಮದಸಾಬ ವಾಲಿಕಾರ, ಪರಸು ಬಿಸನಾಳ, ರಿಯಾಜ ಮಂಗಳವೇಡ, ಹಾಜಿ ಗೌಂಡಿ, ಸಿದ್ದಪ್ಪ ಹಿರೇಕುರಬರ, ಇಸಾಕ ಮೋಮೀನ, ಪುಟ್ಟು ಅಳೋಳಿ, ಬೀಜರಿ ಮತ್ತಣ್ಣ, ನಾಗು ಪೂಜಾರಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net