ಟಿವಿಎಸ್​ ನ್ಯೂ ಜುಪಿಟರ್​ ಸ್ಕೂಟರ್​ ಬಿಡುಗಡೆ

29 Jaggu 11
ವೆಗಾ ಹೆಲ್ಮೆಟ್​ಗಳ ನಿರ್ದೇಶಕ ಸುಹಾಸ ಚಂದಕ ಅವರು ಟಿವಿಎಸ್​ ನ್ಯೂ ಜುಪಿಟರ್​ 113.3 ಸಿಸಿಯ ವಾಹನದ ಕೀ ಗಳನ್ನು ಗ್ರಾಹಕರಿಗೆ ಹಸ್ತಾಂತರಿಸಿದರು. ಮಹೇಂದ್ರಭಾಯಿ ಪಟೇಲ್​, ದೀಪಕ ಬೀದಿಕರ, ಸತೀಶ್​ ನಾಯ್ಕ್​, ಜಯಶ್ರೀ ಪೂಜಾರಿ ಇದ್ದರು.
Published on

ಬೆಳಗಾವಿ: ಹೈಟೆಕ್​ ಮೋರ್ಟಸ್​ ಆ್ಯಂಡ್​ ಆಟೋಮೊಬೈಲ್ಸ್​ ಪೆ.ಲಿ. ನಗರದ ಹಳೇ ಪಿ.ಬಿ. ರಸ್ತೆಯಲ್ಲಿ ಗುರುವಾರ ಟಿವಿಎಸ್​ ನ್ಯೂ ಜುಪಿಟರ್​ 113.3 ಸಿಸಿ ಸಿವಿಟಿಐ ಫ್ಯೂಯಲ್​ ಇಂಜೆಕ್ಷನ್​ ಸ್ಕೂಟರ್​ ಬಿಡುಗಡೆ ಮಾಡಿದೆ.

ಹೈಟೆಕ್​ ಗ್ರೂಪ್​ ನಿರ್ದೇಶಕ ರಾಜೇಶ ಭೋಸಗಿ, ವಿನಯಕುಮಾರ ಬಾಳಿಕಾಯಿ, ಬಸವರಾಜ ತಂಗಡಿ, ಮತ್ತು ರಾಜೇಂದ್ರ ದೇಸಾಯಿ ಹಾಗೂ ಪ್ರಧಾನ ವ್ಯವಸ್ಥಾಪಕ ವಿನೋದ ಕಳ್ಳಿಗುಡ್ಡ, ಸಿಬ್ಬಂದಿ ಇದ್ದರು.

ಅತಿಥಿಯಾಗಿ ಆಗಮಿಸಿದ್ದ ವೆಗಾ ಹೆಲ್ಮೆಟ್​ಗಳ ನಿರ್ದೇಶಕ ಸುಹಾಸ ಚಂದಕ ಅವರು ಟಿವಿಎಸ್​ ನ್ಯೂ ಜುಪಿಟರ್​ 113.3 ಸಿಸಿಯ ವಾಹನದ ಕೀಗಳನ್ನು ಮೊದಲ ಗ್ರಾಹಕರಿಗೆ ಹಸ್ತಾಂತರಿಸಿದರು.

ರಾಜೇಶ್​ ಭೋಸಗಿ ಸ್ವಾಗತಿಸಿ, ತಂತ್ರಾನ ಮತ್ತು ಇತ್ತೀಚಿನ ವೈಶಿಷ್ಟ$್ಯಗಳನ್ನು ಹೊಂದಿರುವ ಬೈಕ್​ಗಳ ಬಗ್ಗೆ ಪರಿಚಯಿಸಿದರು.
ಮಹೇಂದ್ರಭಾಯಿ ಪಟೇಲ್​, ದೀಪಕ ಬೀದಿಕರ, ಸತೀಶ್​ ನಾಯ್ಕ್​, ಜಯಶ್ರೀ ಪೂಜಾರಿ, ರಾಹುಲ್​ ಚಂದಕ, ಶೋಭಾ ಸುತಾರ ಇದ್ದರು. ರಾಜೇಂದ್ರ ದೇಸಾಯಿ ವಂದಿಸಿದರು.

ಟಿವಿಎಸ್​ ಹೊಸ ಜುಪಿಟರ್​ 113.3 ಸಿಸಿ & 11 ಹೊಸ ವೈಶಿಷ್ಟ$್ಯಗಳನ್ನು ಹೊಂದಿದೆ. ನೆಕ್ಸ್​$್ಟ &ಜೆನ್​ ಸ್ಟ್​ಾ&ಗೋ ಟೆಕ್ನಾಲಜಿ ಸೇರಿ ಇದು ಶೇ.10 ಹೆಚ್ಚಿನ ಮೈಲೇಜ್​ ನೀಡುತ್ತದೆ. ಇದು ಗ್ರಾಹಕರಿಗೆ ಹೆಚ್ಚಿನ ಉಳಿತಾಯ ನೀಡುತ್ತದೆ. ವಾಹನವು 6 ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net