

ಚಾಮರಾಜನಗರ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಸುಲ್ತಾನ್, ಮೌಲಾನಾ ಅಬ್ದುಲ್ ಕಲಾಂ ಆಜಾದ್ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಟಿಪ್ಪು ಸುಲ್ತಾನ್ ಅವರು ಅಪ್ಪಟ ದೇಶಪ್ರೇಮಿ ಯಾಗಿದ್ದರು. ಅವರು ತನ್ನ ಆಡಳಿತದ ಅವಧಿಯಲ್ಲಿ ಹೊಸ ನಾಣ್ಯ ವ್ಯವಸ್ಥೆ ಮತ್ತು ಮತ್ತು ಹೊಸ ಭೂಕಂದಾಯ ವ್ಯವಸ್ಥೆಯನ್ನು ಒಳಗೊಂಡಂತೆ ಆಡಳಿತಾತ್ಮಕ ಆವಿಷ್ಕಾರಗಳನ್ನು ಪರಿಚಯಿಸಿದರು. ಅಲ್ಲದೆ ಮೈಸೂರು ರೇಷ್ಮೆ ಉದ್ಯಮದ ಬೆಳವಣಿಗೆಯನ್ನು ಪ್ರಾರಂಭಿಸಿ ಒತ್ತು ನೀಡಿದ್ದರು ಎಂದರು.
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರು ಮೈಸೂರು ಸಾಮ್ರಾಜ್ಯದ ಭಾರತೀಯ ಆಡಳಿತಗಾರರಾಗಿದ್ದರು . ದಕ್ಷಿಣ ಭಾರತದಲ್ಲಿ ಅವರು ರಾಕೆಟ್ ಫಿರಂಗಿಗಳ ಪ್ರವರ್ತಕರಾಗಿದ್ದರು. ಅವರು ಕಬ್ಬಿಣದ ಹೊದಿಕೆಯ ಮೈಸೂರಿಯನ್ ರಾಕೆಟ್‌ಗಳನ್ನು ವಿಸ್ತರಿಸಿದರು ಮತ್ತು ಮಿಲಿಟರಿ ಕೈಪಿಡಿ ಫತುಲ್ ಮುಜಾಹಿದಿನ್ ಅನ್ನು ನಿಯೋಜಿಸಿದರು . ಪೊಲ್ಲಿಲೂರ್ ಕದನ ಮತ್ತು ಶ್ರೀರಂಗಪಟ್ಟಣದ ಮುತ್ತಿಗೆ ಸೇರಿದಂತೆ ಆಂಗ್ಲೋ- ಮೈಸೂರು ಯುದ್ಧಗಳ ಸಮಯದಲ್ಲಿ ಬ್ರಿಟಿಷ್ ಪಡೆಗಳು ಮತ್ತು ಅವರ ಮಿತ್ರರಾಷ್ಟ್ರಗಳ ಪ್ರಗತಿಯ ವಿರುದ್ಧ ಅವರು ರಾಕೆಟ್‌ಗಳನ್ನು ನಿಯೋಜಿಸಿದರು ಎಂದರು.
ಮೌಲಾನ ಅಬ್ದುಲ್ ಕಲಾಂ ಆಜಾದ್ ಅವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಮೊಟ್ಟಮೊದಲ ಬಾರಿಗೆ ಭಾರತ ಸರ್ಕಾರದ ಶಿಕ್ಷಣ ಮಂತ್ರಿಯಾಗಿ ಅಪಾರ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಇವರಗಳನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಚೂಡಾಧ್ಯಕ್ಷ ಮಹಮ್ಮದ್, ಮಾಜಿ ಅಧ್ಯಕ್ಷ ಸೈಯದ್ ರಫೀ, ಅಸ್ಗರ್, ಅಲ್ಲ ಅಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಅಫ್ಜಲ್ ಷರೀಫ್, ಉಪಾಧ್ಯಕ್ಷ ಇನಾಯತ್ ಪಾಷ, ಪ್ರಧಾನ ಕಾರ್ಯದರ್ಶಿ ಆಸೀಫ್ ಉಲ್ಲಾ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು,ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕಲವಾಡಿ ಗುರುಸ್ವಾಮಿ,ಎಪಿಎಂಸಿ ಅಧ್ಯಕ್ಷ ಎಚ್.ಎನ್.ಮಹದೇವಸ್ವಾಮಿ, ತಾ.ಪಂ.ಮಾಜಿ ಸದಸ್ಯರಾದ ಮಹದೇವಶೆಟ್ಟಿ, ಕುಮಾರ್ ನಾಯಕ್, ಕಚೇರಿಗೆ ಕಾರ್ಯದರ್ಶಿ ಎಎಚ್ಎನ್ ಖಾನ್, ಇಮ್ರಾನ್,ಎ.ಎ. ಅಬ್ಬಾಸ್, ನಗರಸಭಾ ಮಾಜಿ ಸದಸ್ಯ ಚೆಂಗುಮಣಿ, ಸಿದ್ದಿಕ್ ಉಲ್ಲಾ, ಅಫ್ಸರ್ ಷರೀಫ್, ಎಂ.ಶಿವಮೂರ್ತಿ, ಕರಿನಂಜನಪುರ ಸ್ವಾಮಿ,ಸೈಯದ್ ಮುಸಾಯಿಬ್, ಗ್ರಾ.ಪಂ.ಅಧ್ಯಕ್ಷ ರೂಪೇಶ್, ಮರಿಯಾಲದಹುಂಡಿ ಕುಮಾರ್ ಇತರರು ಹಾಜರಿದ್ದರು.