ಟಿಪ್ಪು ಸುಲ್ತಾನ್ ಜಯಂತಿ ಸರಳ ಆಚರಣೆ

IMG-20221110-WA0044
ಪಟ್ಟಣ ಸಮೀಪದ ಗಂಜಾಂನ ಗುಂಬಸ್‌ನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಪ್ರಯುಕ್ತ ಗುರುವಾರ ಹಜರತ್ ಟಿಪ್ಪು ಸುಲ್ತಾನ್‌ರ ಸಮಾಧಿಗೆ ಟಿಪ್ಪು ವಕ್ಫ್ ಎಸ್ಟೇಟ್ ಮುಖ್ಯಸ್ಥ ಹಾಗೂ ಶಾಸಕ ತನ್ವೀರ್ ಸೇಠ್ ಹೂವಿನ ಚಾದರ ಹೊದಿಸಿ ಮುಸ್ಲಿಂ ಮುಖಂಡರೊಂದಿಗೆ ಪ್ರಾರ್ಥನೆ ಸಲ್ಲಿಸಿದರು.
Published on

ಶ್ರೀರಂಗಪಟ್ಟಣ: ಹಜರತ್ ಟಿಪ್ಪು ಸುಲ್ತಾನ್ ಜಯಂತಿಯ ಪ್ರಯುಕ್ತ ಮುಸ್ಲಿಂ ಮುಖಂಡರು ಗುರುವಾರ ಸರಳವಾಗಿ ಆಚರಿಸಿ ಪ್ರಾರ್ಥನೆ ಸಲ್ಲಿಸಿದರು.

ಪಟ್ಟಣ ಸಮೀಪದ ಗಂಜಾಂನ ಗುಂಬಸ್‌ನಲ್ಲಿ ಟಿಪ್ಪು ಸುಲ್ತಾನ್ ವಕ್ಫ್ ಎಸ್ಟೇಟ್ ಮುಖ್ಯಸ್ಥ ಹಾಗೂ ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಮೈಸೂರು, ರಾಮನಗರ, ಮಂಡ್ಯ ಹಾಗೂ ಶ್ರೀರಂಗಪಟ್ಟಣದಿಂದ ಆಗಮಿಸಿದ್ದ ಮುಸ್ಲಿಂ ಮುಖಂಡರು ಟಿಪ್ಪು ಸುಲ್ತಾನ್ ಅವರ ಸಮಾಧಿಗೆ ಹೂವಿನ ಚಾದರ ಹೊದಿಸಿ, ನವಾಬ್ ಹೈದರಾಲಿ ಹಾಗೂ ಫಾತೀಮಾ ಫಕ್ರುನ್ನೀಸಾ ಅವರ ಸಮಾಧಿಗಳಿಗೆ ಪುಷ್ಪಾರ್ಚನೆ ಬಳಿಕ ಮೌಲ್ವಿಗಳ ಸಮ್ಮುಖದಲ್ಲಿ ಕೆಲ ನಿಮಿಷ ಪ್ರಾರ್ಥನೆ ಸಲ್ಲಿಸಿದರು.

ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 30ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ 100ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಭದ್ರತೆ ಕೈಗೊಳ್ಳಲಾಗಿತ್ತು.

ಟಿಪ್ಪು ವಕ್ಫ್ ಎಸ್ಟೇಟ್ ಕಮಿಟಿ ಸದಸ್ಯ ಇಕ್ಬಾಲ್, ಮಾಜಿ ಚೇರ್ಮನ್ ಉಬೇದ್, ಕಾರ್ಯದರ್ಶಿ ಖಜಾಂಚಿ ಇರ್ಫಾನ್ ಮಸರ್, ಮುಖಂಡರಾದ ಮುಜೀಬ್, ಅಕ್ರಮ್, ಏಜಾಜ್ ಪಾಷ, ಸಲೀಂ ಇತರರುಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net