

ಮೈಸೂರು; ಪಠ್ಯದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂದು ಕೊಡಲಾಗುತ್ತಿತ್ತು. ಆದರೆ ಟಿಪ್ಪು ಯಾವ ಹುಲಿ ಕೊಂದಿದ್ದಾನೆ. ಏಕಾಂಗಿಯಾಗಿ, ಬರಿಗೈಯಲ್ಲಿ ಹುಲಿ ಕೊಲ್ಲುವುದು ಹೇಗೆ ಸಾಧ್ಯ ಎಂದು ಸಂಸದ ಪ್ರತಾಪಸಿಂಹ ಪ್ರಶ್ನಿಸಿದರು.
ಎರಡನೇ ಮೈಸೂರು ಯುದ್ಧದಲ್ಲಿ ಹೈದರ್‌ಅಲಿ ಸತ್ತ ಮೇಲೆ ಒಂದು ಯುದ್ಧವನ್ನೂ ಗೆಲ್ಲಲಾಗದ ಟಿಪ್ಪು ಸುಲ್ತಾನ್ ಹೇಗೆ ಆಗುತ್ತಾನೆ? ದೇಶದಲ್ಲಿ ಮುಸ್ಲಿಮರು ಎಂದೂ ಏಕಾಂಗಿಯಾಗಿ ಶೌರ್ಯ ಮೆರೆದಿಲ್ಲ, ಕ್ರೌರ್ಯ ಮೆರೆದಿದ್ದಾರೆ. 3ನೇ ಮಹಾಯುದ್ಧದಲ್ಲಿ ರಣರಂಗಕ್ಕೂ ಬಾರದೆ, ಕೋಟೆ ಒಳಗೆ ಸತ್ತ ಟಿಪ್ಪು ಸುಲ್ತಾನ್ ಆಗಲು ಸಾಧ್ಯವೇ ಇಲ್ಲ. ಹಿಂದಿ ಏರಿಕೆ ಎಂದು ಹೋರಾಟ ನಡೆಸುವ ಕನ್ನಡಪರ ಹೋರಾಟಗಾರರು ನಿಜವಾದ ಕನ್ನಡ ಪದ ಬಿಟ್ಟು ಪರ್ಷಿಯನ್ ತುಂಬಿದ ಟಿಪ್ಪು ವಿರುದ್ಧ ಹೋರಾಟ ಮಾಡುವುದಿಲ್ಲ. ಅನೇಕ ಸಂಶೋಧನೆ ನಡೆಸಿದ್ದೇನೆ ಎಂದಿದ್ದ ಸಾಹಿತಿ ಕಲಬುರ್ಗಿ ಅವರು ಟಿಪ್ಪುವಿನ ಕನ್ನಡ ವಿರೋಧಿತನವನ್ನು ಏಕೆ ಸಂಶೋಧನೆ ಮಾಡಲಿಲ್ಲ. ಜನಪ್ರತಿನಿಧಿಯಾಗಿ ಓಟಿಗಾಗಿ ಶಾಸಕ ತನ್ವೀರ್‌ಸೇಠ್ ಟಿಪ್ಪು ಸಮರ್ಥನೆಯಲ್ಲಿ ನ್ಯಾಯವಿದೆ, ಆದರೆ ವಿಶ್ವನಾಥ್‌ಗೆ ಏನು ಅನಿವಾರ್ಯತೆ ಇದೆ? ಎಂದು ಲೇವಡಿ ಮಾಡಿದರು.
ರೈಲಿಗೆ ಟಿಪ್ಪು ಹೆಸರು ತೆಗೆದು, ಒಡೆಯರ್ ಹೆಸರು ನಾಮಕರಣ ಮಾಡಿದಂತೆ, ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು, ರೈಲ್ವೆ ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಹೆಸರು ಇಡಲಾಗುವುದು. ಅಲ್ಲದೇ ನಗರದಲ್ಲಿ ಗುಂಬಜ್ ರೀತಿ ನಿರ್ಮಿಸಿರುವ ಬಸ್ ಶೆಲ್ಟರ್‌ಗಳನ್ನು ನಿಗದಿತ ಅವಧಿಯೊಳಗೆ ತೆಗೆಯದಿದ್ದರೆ ನಾನೇ ಬುಲ್ಡೋಜರ್ ತೆಗೆದುಕೊಂಡು ಹೋಗಿ ತೆಗೆಯುತ್ತೇನೆ ಎಂದು ಎಚ್ಚರಿಸಿದರು.